MICROSOFT ಮಾರಾಟದನಿಯಮಗಳು

ಫೆಬ್ರವರಿ 2017 ರಂದು ನವೀಕರಿಸಲಾಗಿದೆ

Microsoft ನ ಆನ್‌ಲೈನ್ ಮತ್ತು ರಿಟೇಲ್ ಸ್ಟೋರ್‌ಗಳಿಗೆ ಸ್ವಾಗತ. "ಸ್ಟೋರ್" ಎನ್ನುವುದು ನಿಮಗೆ ಸಾಧನಗಳು, ಆಟದ ಕನ್ಸೋಲ್‌ಗಳು, ಡಿಜಿಟಲ್ ವಿಷಯ, ಅಪ್ಲಿಕೇಶನ್‌ಗಳು, ಆಟಗಳು, ಸೇವೆಗಳು ಹಾಗೂ ಹೆಚ್ಚಿನವುಗಳನ್ನು ಒಳಗೊಂಡಂತೆ ಉತ್ಪನ್ನಗಳು ಮತ್ತು ಸೇವೆಗಳನ್ನು ಬ್ರೌಸ್ ಮಾಡಲು, ವೀಕ್ಷಿಸಲು, ಪಡೆಯಲು, ಖರೀದಿಸಲು ಮತ್ತು ರೇಟ್ ಮಾಡಲು ಮತ್ತು ಪರಿಶೀಲಿಸಲು ಅನುಮತಿಸುವ ನಮ್ಮ ಆನ್‌ಲೈನ್ ಮತ್ತು ರಿಟೇಲ್ ಸ್ಥಳಗಳಾಗಿವೆ. ಈ ಮಾರಾಟದ ನಿಯಮಗಳು ("ಮಾರಾಟದ ನಿಯಮಗಳು") Microsoft ಸಂಗ್ರಹ, Office ಸ್ಟೋರ್, Xbox ಸ್ಟೋರ್, Windows ಸ್ಟೋರ್ ಮತ್ತು ಈ ಮಾರಾಟದ ನಿಯಮಗಳನ್ನು ಉಲ್ಲೇಖಿಸುವ ಇತರ Microsoft ಸೇವೆಗಳನ್ನು (ಒಟ್ಟಾರೆಯಾಗಿ "ಸ್ಟೋರ್") ಒಳಗೊಂಡಿರುತ್ತವೆ. ಸ್ಟೋರ್ ಮೂಲಕ, Microsoft ನಿಮಗೆ ಡೌನ್‌ಲೋಡ್ ಪ್ರದೇಶಗಳು, ಸಾಫ್ಟ್‌ವೇರ್, ಪರಿಕರಗಳನ್ನು ಒಳಗೊಂಡಂತೆ ವಿವಿಧ ಸಂಪನ್ಮೂಲಗಳಿಗೆ ಮತ್ತು ಸಾಫ್ಟ್‌ವೇರ್, ಸೇವೆಗಳು ಮತ್ತು ಇತರ ಮರ್ಚಂಡೈಸ್ ಕುರಿತಾದ ಮಾಹಿತಿಗೆ (ಒಟ್ಟಾರೆಯಾಗಿ "ಸೇವೆಗಳು" ಮತ್ತು ಸ್ಟೋರ್ ಜೊತೆಗೆ, "ಸ್ಟೋರ್") ಪ್ರವೇಶವನ್ನು ಒದಗಿಸುತ್ತದೆ. ಸ್ಟೋರ್‌ನಲ್ಲಿ ನೀಡುವ ಹಲವು ಉತ್ಪನ್ನಗಳು, ಸೇವೆಗಳು ಮತ್ತು ವಿಷಯವು Microsoft ಹೊರತುಪಡಿಸಿದ ಇರವುಗಳು ನೀಡುವ ಮೂರನೇ-ವ್ಯಕ್ತಿ ಉತ್ಪನ್ನಗಳಾಗಿವೆ. ಸ್ಟೋರ್ ಬಳಸುವ ಮೂಲಕ ಅಥವಾ ಸ್ಟೋರ್‌ನಿಂದ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸುವ ಮೂಲಕ, ನೀವು ಈ ಮಾರಾಟದ ನಿಯಮಗಳು, Microsoft ನ ಗೌಪ್ಯತೆ ಹೇಳಿಕೆ (ಕೆಳಗಿನ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ರಕ್ಷಣೆ ವಿಭಾಗವನ್ನು ನೋಡಿ) ಮತ್ತು ಸ್ಟೋರ್‌ನಲ್ಲಿ ಕಂಡುಬರುವ ಅಥವಾ ಈ ಮಾರಾಟದ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ (ಒಟ್ಟಾರೆಯಾಗಿ "ಸ್ಟೋರ್ ನೀತಿಗಳು") ಅನ್ವಯಿಸುವ ನಿಯಮಗಳು ಮತ್ತು ಷರತ್ತುಗಳು, ನೀತಿಗಳು ಅಥವಾ ಹಕ್ಕುನಿರಾಕರಣೆಗಳನ್ನು ಒಪ್ಪುತ್ತೀರಿ ಮತ್ತು ಅವುಗಳಿಗೆ ಸಮ್ಮತಿಸುತ್ತೀರಿ. ಸ್ಟೋರ್ ನಿಯಮಗಳನ್ನು ಎಚ್ಚರಿಕೆಯಿಂದ ಓದುವಂತೆ ನಾವು ನಿಮಗೆ ಪ್ರೋತ್ಸಾಹಿಸುತ್ತೇವೆ. ಸ್ಟೋರ್ ನಿಯಮಗಳಿಗೆ ನೀವು ಒಪ್ಪದೇ ಇದ್ದರೆ ಸ್ಟೋರ್ ಅಥವಾ ಸೇವೆಗಳನ್ನು ನೀವು ಬಳಸಬಾರದು.

ನಿಮ್ಮ ದೇಶ ಅಥವಾ ಪ್ರಾಂತ್ಯದಲ್ಲಿ ಇರುವ Microsoft ರಿಟೇಲ್ ಸ್ಟೋರ್ ಅನ್ನು ನಾವು ಹೊಂದಿದ್ದರೆ, ಅದು ವಿಭಿನ್ನವಾದ ಅಥವಾ ಹೆಚ್ಚುವರಿ ನೀತಿಗಳನ್ನು ಹೊಂದಿರಬಹುದು. ಯಾವುದೇ ಸಮಯದಲ್ಲಿ ಯಾವುದೇ ಸೂಚನೆ ನೀಡದೆಯೇ ಯಾವುದೇ ನೀತಿಗಳನ್ನು Microsoft ಪರಿಷ್ಕರಿಸಬಹುದು ಅಥವಾ ತಿದ್ದುಪಡಿ ಮಾಡಬಹುದು.

ಸ್ಟೋರ್‌ನ ನಿಮ್ಮ ಬಳಕೆಗೆ ಸಂಬಂಧಿಸಿದ ನಿಯಮಗಳು

1. ಸದಸ್ಯ ಖಾತೆ. ಸ್ಟೋರ್‌ಗೆ ನೀವು ಖಾತೆಯನ್ನು ತೆರೆಯುವುದು ಅಗತ್ಯವಾಗಿದ್ದರೆ, ಅನ್ವಯಿಸುವ ನೋಂದಣಿ ಪತ್ರದಲ್ಲಿ ಅಗತ್ಯವಾಗಿರುವ ಪ್ರಕಾರ ನಮಗೆ ನೀವು ಪ್ರಸ್ತುತವಾದ, ಸಂಪೂರ್ಣವಾದ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಬೇಕು. ಖಾತೆಯನ್ನು ತೆರೆಯುವ ಷರತ್ತಾಗಿ ಸೇವೆ ಒಪ್ಪಂದವನ್ನು ಅಥವಾ ಪ್ರತ್ಯೇಕ ಬಳಕೆಯ ನಿಯಮಗಳನ್ನೂ ಸಹ ಒಪ್ಪುವುದು ನಿಮಗೆ ಅಗತ್ಯವಾಗಬಹುದು. ಸ್ಟೋರ್ ಅನ್ನು ಮತ್ತು ಸ್ಟೋರ್‌ನಿಂದ ನೀವು ಪಡೆದುಕೊಂಡ ವಿಷಯವನ್ನು ಪ್ರವೇಶಿಸುವುದಕ್ಕಾಗಿ ಖಾತೆಯ ನಿಮ್ಮ ಬಳಕೆಯು Microsoft ಖಾತೆಯನ್ನು ನಿಯಂತ್ರಿಸುವ ಎಲ್ಲಾ ನಿಯಮಗಳಿಗೆ ಒಳಪಟ್ಟಿರುತ್ತದೆ. ಹೆಚ್ಚಿನ ಮಾಹಿತಿಗೆ, ದಯವಿಟ್ಟು Microsoft ಸೇವೆಗಳ ಒಪ್ಪಂದ ನೋಡಿ. ನಿಮ್ಮ ಖಾತೆ ಮಾಹಿತಿ ಮತ್ತು ಪಾಸ್‌ವರ್ಡ್ ರುಜುವಾತು ರಹಸ್ಯವಾಗಿ ಇರಿಸಿಕೊಳ್ಳಲು ಮತ್ತು ನಿಮ್ಮ ಖಾತೆಯ ಅಡಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

2. ಯಾವುದೇ ಕಾನೂನುಬಾಹಿರ ಅಥವಾ ನಿಷೇಧಿತ ಬಳಕೆ ಇಲ್ಲ. ಸ್ಟೋರ್ ಮತ್ತು ಸೇವೆಗಳ ನಿಮ್ಮ ಬಳಕೆಯ ಷರತ್ತಾಗಿ, ನೀವು ಸ್ಟೋರ್ ಅನ್ನು ಕಾನೂನುಬಾಹಿರವಾಗಿರುವ ಅಥವಾ ಈ ಮಾರಾಟದ ನಿಯಮಗಳು, ಸ್ಟೋರ್ ನೀತಿಗಳು ಅಥವಾ ಸ್ಟೋರ್‌ನ ನಿಮ್ಮ ಬಳಕೆಗೆ ಅನ್ವಯಿಸುವ ಇತರ ಯಾವುದೇ ನಿಯಮಗಳಿಂದ ನಿಷೇಧಿಸವಾಗಿರುವ ಯಾವುದೇ ಉದ್ದೇಶಗಳಿಗೆ ಬಳಸುವುದಿಲ್ಲ ಎಂಬುದಾಗಿ ನಮಗೆ ಪ್ರಮಾಣೀಕರಿಸುತ್ತೀರಿ. ನೀವು ಸ್ಟೋರ್ ಅನ್ನು ಯಾವುದೇ Microsoft ಸರ್ವರ್ ಅಥವಾ ಯಾವುದೇ Microsoft ಸರ್ವರ್‌ಗೆ ಸಂಪರ್ಕಿತವಾಗಿರುವ ನೆಟ್‌ವರ್ಕ್(ಗಳಿಗೆ)ಗೆ ಹಾನಿ ಮಾಡುವ, ಅವುಗಳನ್ನು ನಿಷ್ಕ್ರಿಯಗೊಳಿಸುವ, ಅಧಿಕ ಒತ್ತಡ ಉಂಟುಮಾಡುವ ಅಥವಾ ದುರ್ಬಲಗೊಳಿಸುವ ಅಥವಾ ಇತರ ಯಾವುದೇ ವ್ಯಕ್ತಿಯ ಸ್ಟೋರ್‌ನ ಬಳಕೆ ಮತ್ತು ಆನಂದಿಸುವಿಕೆಗೆ ಅಡ್ಡಿಪಡಿಸುವ ಯಾವುದೇ ರೀತಿಯಲ್ಲಿ ಸ್ಟೋರ್ ಅನ್ನು ಬಳಸಬಾರದು. ಹ್ಯಾಕಿಂಗ್, ಪಾಸ್‌ವರ್ಡ್ ಮೈನಿಂಗ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಯಾವುದೇ Microsoft ಸರ್ವರ್ ಅಥವಾ ಸ್ಟೋರ್‌ಗೆ ಸಂಪರ್ಕಿತವಾಗಿರುವ ಸ್ಟೋರ್, ಇತರ ಖಾತೆಗಳು, ಕಂಪ್ಯೂಟರ್ ಸಿಸ್ಟಂಗಳು ಅಥವಾ ನೆಟ್‌ವರ್ಕ್‌ಗೆ ಅನಧಿಕೃತ ಪ್ರವೇಶವನ್ನು ಪಡೆಯಲು ನೀವು ಪ್ರಯತ್ನಿಸಬಾರದು. ಸ್ಟೋರ್ ಮೂಲಕ ಉದ್ದೇಶಪೂರ್ವವಕಾಗಿ ಲಭ್ಯವಾಗುವಂತೆ ಮಾಡದ ಯಾವುದೇ ವಿಧಾನಗಳ ಮೂಲಕ ಯಾವುದೇ ವಿಷಯಗಳನ್ನು ಅಥವಾ ಮಾಹಿತಿಯನ್ನು ನೀವು ಪಡೆಯಬಾರದು ಅಥವಾ ಪಡೆಯಲು ಪ್ರಯತ್ನಿಸಬಾರದು. Microsoft ಒಳಗೊಂಡು ವ್ಯಕ್ತಿ ಅಥವಾ ಇರವುಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವುದನ್ನು ಒಳಗೊಂಡಂತೆ, ಮೂರನೇ ವ್ಯಕ್ತಿಗಳ ಹಕ್ಕುಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಸ್ಟೋರ್ ಅನ್ನು ನೀವು ಬಳಸಬಾರದು. ಸ್ಟೋರ್‌ನಿಂದ ಪಡೆದುಕೊಂಡ ಯಾವುದೇ ಉತ್ಪನ್ನಗಳು, ಮಾಹಿತಿ ಅಥವಾ ಸೇವೆಗಳನ್ನು ನೀವು ವಾಣಿಜ್ಯಿಕವಾಗಿ ವಿತರಣೆ ಮಾಡಬಾರದು, ಪ್ರಕಟಿಸಬಾರದು, ಪರವಾನಗಿ ನೀಡಬಾರದು ಅಥವಾ ಮಾರಾಟ ಮಾಡಬಾರದು.

3. ಸ್ಟೋರ್‌ನಲ್ಲಿ ನೀವು Microsoft ಗೆ ಒದಗಿಸುವ ಅಥವಾ ಪೋಸ್ಟ್ ಮಾಡುವ ವಿಷಯಗಳು. ನೀವು Microsoft ಗೆ ಒದಗಿಸುವ ವಿಷಯಗಳ ಮಾಲೀಕತ್ವವನ್ನು Microsoft ಕ್ಲೈಮ್ ಮಾಡುವುದಿಲ್ಲ (ಪ್ರತಿಕ್ರಿಯೆ, ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ಸಲಹೆಗಳು) ಅಥವಾ ಇತರರ ಪರಿಶೀಲನೆಗಾಗಿ ಅವುಗಳನ್ನು ಸ್ಟೋರ್‌ಗೆ ಅಥವಾ ಸಂಬಂಧಿತ Microsoft ಸೇವೆಗಳಿಗೆ ಪೋಸ್ಟ್ ಮಾಡುವುದಿಲ್ಲ, ಅಪ್‌ಲೋಡ್ ಮಾಡುವುದಿಲ್ಲ ಅಥವಾ ಇನ್‌ಪುಟ್ ಮಾಡುವುದಿಲ್ಲ ಅಥವಾ ಸಲ್ಲಿಸುವುದಿಲ್ಲ (ಪ್ರತಿ "ಸಲ್ಲಿಕೆ" ಮತ್ತು ಒಟ್ಟಾರೆಯಾಗಿ "ಸಲ್ಲಿಕೆಗಳು"). ಆದರೆ, ಯಾವುದೇ ಮಾಧ್ಯಮದಲ್ಲಿ ನಿಮ್ಮ ಹೆಸರನ್ನು ಒಳಗೊಂಡು ನಿಮ್ಮ ಸಲ್ಲಿಕೆಯನ್ನು ಬಳಸುವ, ಮಾರ್ಪಡಿಸುವ, ಅಳವಡಿಸಿಕೊಳ್ಳುವ, ಪುನರುತ್ಪಾದಿಸುವ, ವ್ಯುತ್ಪನ್ನ ರಚನೆಗಳನ್ನು ಮಾಡುವ, ಅನುವಾದಿಸುವ, ಸಂಪಾದಿಸುವ, ಕಾರ್ಯನಿರ್ವಹಿಸುವ, ವಿತರಣೆ ಮಾಡುವ ಮತ್ತು ಪ್ರದರ್ಶಿಸುವ ಹಕ್ಕನ್ನು ನೀವು Microsoft ಗೆ ರಾಯಲ್ಟಿ-ಮುಕ್ತವಾದ, ಶಾಶ್ವತವಾದ, ಹಿಂದಕ್ಕೆ ತೆಗೆದುಕೊಳ್ಳಲಾಗದ, ವಿಶ್ವದಾದ್ಯಂತದ, ಪ್ರತ್ಯೇಕವಲ್ಲದ ಮತ್ತು ಉಪ-ಪರವಾನಗಿ ನೀಡಬಹುದಾದ ಹಕ್ಕನ್ನು ನೀಡುತ್ತೀರಿ. ಯಾವುದೇ ನಿರ್ಬಂಧಗಳಿಲ್ಲದೇ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಲಭ್ಯವಿರುವಲ್ಲಿ ಸ್ಟೋರ್‌ ಪ್ರದೇಶಗಳಲ್ಲಿ ನಿಮ್ಮ ಸಲ್ಲಿಕೆಯನ್ನು ನೀವು ಪ್ರಕಟಿಸಿದರೆ, ನಿಮ್ಮ ಸಲ್ಲಿಕೆಯು ಸ್ಟೋರ್ ಅನ್ನು ಮತ್ತು/ಅಥವಾ ಸ್ಟೋರ್‌ನಲ್ಲಿ ನೀಡಲಾಗುವ ಉತ್ಪನ್ನಗಳು, ಸೇವೆಗಳು ಮತ್ತು ವಿಷಯವನ್ನು ಉತ್ತೇಜಿಸುವ ಪ್ರದರ್ಶನಗಳು ಮತ್ತು ವಿಷಯಗಳಲ್ಲಿ ಕಂಡುಬರಬಹುದು. ನೀವು ಒದಗಿಸುವ ಯಾವುದೇ ಸಲ್ಲಿಕೆಯನ್ನು ಮಾಡಲು ಮತ್ತು ಈ ಹಕ್ಕುಗಳನ್ನು Microsoft ಗೆ ಒದಗಿಸಲು ಅಗತ್ಯವಾದ ಎಲ್ಲಾ ಹಕ್ಕುಗಳು ನಿಮ್ಮ ಬಳಿ ಇವೆ ಎಂಬುದಾಗಿ ನೀವು ಪ್ರಮಾಣೀಕರಿಸುತ್ತೀರಿ ಮತ್ತು ನಿರೂಪಿಸುತ್ತೀರಿ.

ನಿಮ್ಮ ಸಲ್ಲಿಕೆಯ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ಪಾವತಿಸಲಾಗುವುದಿಲ್ಲ. ಯಾವುದೇ ಸಲ್ಲಿಕೆಯನ್ನು ಪೋಸ್ಟ್ ಮಾಡಲು ಅಥವಾ ಬಳಸಲು Microsoft ಗೆ ಯಾವುದೇ ಬಾಧ್ಯತೆ ಇರುವುದಿಲ್ಲ ಮತ್ತು Microsoft ತನ್ನ ಏಕೈಕ ವಿವೇಚನೆಯಲ್ಲಿ ಯಾವುದೇ ಸಲ್ಲಿಕೆಯನ್ನು ಯಾವುದೇ ಸಮಯದಲ್ಲಿ ತೆಗೆದುಹಾಕಬಹುದು. ನಿಮ್ಮ ಸಲ್ಲಿಕೆಗಳಿಗೆ ಅಥವಾ ಸ್ಟೋರ್ ಬಳಸಿಕೊಂಡು ಇತರರು ಪೋಸ್ಟ್ ಮಾಡುವ, ಅಪ್‌ಲೋಡ್ ಮಾಡುವ, ಇನ್‌ಪುಟ್ ಮಾಡುವ ಅಥವಾ ಸಲ್ಲಿಸುವ ವಿಷಯಕ್ಕೆ Microsoft ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಯಾವುದೇ ಬಾಧ್ಯತೆಯನ್ನು ವಹಿಸಿಕೊಳ್ಳುವುದಿಲ್ಲ.

ನೀವು ಸ್ಟೋರ್‌ನಲ್ಲಿ ಯಾವುದೇ ಒಂದು ಅಪ್ಲಿಕೇಶನ್‌ಗೆ ರೇಟ್ ಮಾಡಿದ್ದರೆ ಅಥವಾ ವಿಮರ್ಶೆ ಮಾಡಿದ್ದರೆ, ಅಪ್ಲಿಕೇಶನ್‌ನ ಪ್ರಕಾಶಕರ ವಿಷಯವನ್ನು ಒಳಗೊಂಡಿರುವ ಇಮೇಲ್ ಒಂದನ್ನು ನೀವು Microsoft ನಿಂದ ಪಡೆಯಬಹುದಾಗಿದೆ.

4. ಮೂರನೇ-ವ್ಯಕ್ತಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು. ಮೂರನೇ-ವ್ಯಕ್ತಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಸ್ಟೋರ್ ಒಳಗೊಂಡಿರಬಹುದು ಮತ್ತು ಅವುಗಳು ನಿಮಗೆ ಸ್ಟೋರ್ ತೊರೆಯಲು ಅವಕಾಶ ನೀಡುತ್ತವೆ. ಈ ಲಿಂಕ್ ಆದ ಸೈಟ್‌ಗಳು Microsoft ನಿಯಂತ್ರಣದಲ್ಲಿರುವುದಿಲ್ಲ ಮತ್ತು ಯಾವುದೇ ಲಿಂಕ್ ಆದ ಸೈಟ್‌ಗೆ ಅಥವಾ ಲಿಂಕ್ ಆದ ಸೈಟ್‌ನಲ್ಲಿ ಒಳಗೊಂಡಿರುವ ಯಾವುದೇ ಲಿಂಕ್‌ಗೆ Microsoft ಜವಾಬ್ದಾರಿಯಾಗಿರುವುದಿಲ್ಲ. Microsoft ಈ ಲಿಂಕ್‌ಗಳನ್ನು ನಿಮಗೆ ಅನುಕೂಲಕ್ಕಾಗಿ ಮಾತ್ರವೇ ಒದಗಿಸುತ್ತಿದೆ ಮತ್ತು ಯಾವುದೇ ಲಿಂಕ್ ಸೇರ್ಪಡೆಯು ಸೈಟ್ ಅನ್ನು Microsoft ಅನುಮೋದಿಸುತ್ತದೆ ಎಂಬುದಾಗಿ ಸೂಚಿಸುವುದಿಲ್ಲ. ಮೂರನೇ-ವ್ಯಕ್ತಿ ವೆಬ್‌ಸೈಟ್‌ನ ನಿಮ್ಮ ಬಳಕೆಯು ಆ ಮೂರನೇ ವ್ಯಕ್ತಿಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.

ನಿಮಗೆ ಉತ್ಪನ್ನಗಳು ಮತ್ತು ಸೇವೆಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳು

5. ಭೌಗೋಳಿಕ ಲಭ್ಯತೆ. ಲಭ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳು ನಿಮ್ಮ ಪ್ರಾಂತ್ಯ ಅಥವಾ ಸಾಧನವನ್ನು ಅವಲಂಬಿಸಿ ಬದಲಾಗಬಹುದು. ಜೊತೆಗೆ, ನಮ್ಮ ಶಿಪ್ಪಿಂಗ್ ನೀತಿಗಳಲ್ಲಿ ನಿರೂಪಿಸಲಾಗಿರುವಂತೆ ನಾವು ಉತ್ಪನ್ನಗಳನ್ನು ಎಲ್ಲಿಗೆ ಶಿಪ್ ಮಾಡಬೇಕೆಂಬುದರ ಮೇಲೆ ಮಿತಿಗಳಿರಬಹುದು. ಖರೀದಿಯನ್ನು ಪೂರ್ಣಗೊಳಿಸಲು, ನೀವು ಖರೀದಿಸುತ್ತಿರುವ ಸ್ಟೋರ್‌ನ ದೇಶ ಅಥವಾ ಪ್ರಾಂತ್ಯದೊಳಗಿನ ಮಾನ್ಯವಾದ ಬಿಲ್ಲಿಂಗ್ ಮತ್ತು ಶಿಪ್ಪಿಂಗ್ ವಿಳಾಸವನ್ನು ನೀವು ಹೊಂದಿರಬೇಕಾಗಬಹುದು.

6. ಅಂತಿಮ ಬಳಕೆದಾರರು ಮಾತ್ರ. ಸ್ಟೋರ್‌ನಿಂದ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ನೀವು ಅಂತಿಮ ಬಳಕೆದಾರರಾಗಿರಬೇಕಾಗುತ್ತದೆ. ಮರುಮಾರಾಟಗಾರರು ಖರೀದಿ ಮಾಡಲು ಅರ್ಹರಾಗಿರುವುದಿಲ್ಲ.

7. ರಫ್ತು ಮಿತಿಗಳು. ಸ್ಟೋರ್‌ನಿಂದ ಖರೀದಿಸಿದ ಉತ್ಪನ್ನಗಳು ಮತ್ತು ಸೇವೆಗಳು ಕಸ್ಟಮ್‌ಗಳು ಮತ್ತು ರಫ್ತು ನಿಯಂತ್ರಣ ಕಾನೂನುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರಬಹುದು. ಅನ್ವಯಿಸುವ ಎಲ್ಲಾ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನೀವು ಒಪ್ಪುತ್ತೀರಿ.

8. ಬಿಲ್ಲಿಂಗ್. Microsoft ಗೆ ಬಿಲ್ಲಿಂಗ್ ವಿಧಾನವನ್ನು ಒದಗಿಸುವ ಮೂಲಕ, ನೀವು: (i) ನೀವು ಒದಗಿಸಿದ ಪಾವತಿ ವಿಧಾನವನ್ನು ಬಳಸಲು ನಿಮಗೆ ಅಧಿಕಾರವಿದೆ ಮತ್ತು ನೀವು ಒದಗಿಸಿದ ಯಾವುದೇ ಪಾವತಿ ಮಾಹಿತಿಯು ನಿಜವಾಗಿದೆ ಮತ್ತು ಸತ್ಯವಾಗಿದೆ ಎಂದು ನಿರೂಪಿಸುತ್ತೀರಿ; (ii) ನಿಮ್ಮ ಪಾವತಿ ವಿಧಾನವನ್ನು ಬಳಸಿಕೊಂಡು ಖರೀದಿಸಿದ ಯಾವುದೇ ಉತ್ಪನ್ನಗಳು, ಸೇವೆಗಳು ಅಥವಾ ಲಭ್ಯ ವಿಷಯಕ್ಕೆ ಶುಲ್ಕ ವಿಧಿಸಲು Microsoft ಗೆ ಅಧಿಕಾರ ನೀಡುತ್ತೀರಿ; ಮತ್ತು (iii) ನೀವು ಸೈನ್ ಅಪ್ ಮಾಡಲು ಅಥವಾ ಬಳಸಲು ಆರಿಸಿಕೊಳ್ಳುವ ಸ್ಟೋರ್‌ನ ಯಾವುದೇ ಪಾವತಿಸಿದ ಲಕ್ಷಣಕ್ಕೆ ಶುಲ್ಕ ವಿಧಿಸಲು Microsoft ಗೆ ಅಧಿಕಾರ ನೀಡುತ್ತೀರಿ. ನಾವು ನಿಮ್ಮ ವಹಿವಾಟುಗಳನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ವಹಿವಾಟುಗಳಿಗೆ ಸಂಬಂಧಿಸಿದಂತೆ ಅಗತ್ಯವಾದಾಗ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಮಾಡಲು, ನಿಮ್ಮ ಇಮೇಲ್ ವಿಳಾಸ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಮತ್ತು ವಾಯಿದೆ ದಿನಾಂಕಗಳನ್ನು ಒಳಗೊಂಡಂತೆ ನಿಮ್ಮ ಖಾತೆ ಮತ್ತು ಇತರ ಮಾಹಿತಿಯನ್ನು ಪರಿಷ್ಕರಿಸಲು ನೀವು ಒಪ್ಪುತ್ತೀರಿ. ನಾವು ನಿಮಗೆ (a) ಮುಂಚಿತವಾಗಿ ಬಿಲ್ ಮಾಡಬಹುದು; (b) ಖರೀದಿ ಸಮಯದಲ್ಲಿ ಬಿಲ್ ಮಾಡಬಹುದು; (c) ಖರೀದಿಯ ನಂತರ ಬಿಲ್ ಮಾಡಬಹುದು; ಅಥವಾ (d) ಚಂದಾದಾರಿಕೆಗಳಿಗೆ ಪುನರಾವರ್ತನೆಯ ಆಧಾರದಲ್ಲಿ ಬಿಲ್ ಮಾಡಬಹುದು. ಹಾಗೆಯೇ, ನೀವು ಅನುಮೋದಿಸಿರುವ ಮೊತ್ತದವರೆಗೆ ನಾವು ನಿಮಗೆ ಶುಲ್ಕ ವಿಧಿಸಬಹುದು ಮತ್ತು ಪುನರಾವರ್ತನೆಯ ಚಂದಾದಾರಿಕೆಗೆ ವಿಧಿಸಬೇಕಾದ ಶುಲ್ಕದಲ್ಲಿನ ಮೊತ್ತದ ಯಾವುದೇ ಬದಲಾವಣೆಯ ಕುರಿತಂತೆ ಮುಂಚಿತವಾಗಿ ಮತ್ತು ನಿಮ್ಮ ಚಂದಾದಾರಿಕೆಯ ನಿಯಮಗಳ ಅನುಸಾರ ನಾವು ನಿಮಗೆ ಸೂಚನೆ ನೀಡುತ್ತೇವೆ. ಈ ಹಿಂದೆ ಪ್ರಕ್ರಿಯೆಗೊಳಿಸಿರದ ಮೊತ್ತಗಳಿಗಾಗಿ ಒಂದಕ್ಕಿಂತ ಹೆಚ್ಚು ನಿಮ್ಮ ಮುಂಚಿತ ಬಿಲ್ಲಿಂಗ್ ಅವಧಿಗಳಿಗೆ ಅದೇ ಸಮಯದಲ್ಲಿ ನಾವು ನಿಮಗೆ ಬಿಲ್ ಮಾಡಬಹುದು. ಕೆಳಗಿನ ಸ್ವಯಂಚಾಲಿತ ನವೀಕರಣ ವಿಭಾಗವನ್ನು ನೋಡಿ.

ನೀವು ಯಾವುದೇ ಪ್ರಯೋಗ-ಅವಧಿಯ ಕೊಡುಗೆಯಲ್ಲಿ ಭಾಗವಹಿಸುತ್ತಿದ್ದರೆ, ನಾವು ನಿಮಗೆ ಸೂಚಿಸಿದ ಹೊರತು ಯಾವುದೇ ಹೊಸ ಶುಲ್ಕಗಳು ವಿಧಿಸಲ್ಪಡೇ ಇರುವುದನ್ನು ತಪ್ಪಿಸಲು ಪ್ರಯೋಗ ಅವಧಿಯ ಕೊನೆಯಲ್ಲಿ ಸೇವೆಯನ್ನು ನೀವು ರದ್ದುಗೊಳಿಸಬೇಕು. ಪ್ರಯೋಗ ಅವಧಿಯ ಅಂತ್ಯದಲ್ಲಿ ನೀವು ಸೇವೆಯನ್ನು ರದ್ದುಗೊಳಿಸದೇ ಇದ್ದರೆ, ಉತ್ಪನ್ನ ಅಥವಾ ಸೇವೆಗೆ ನಿಮ್ಮ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲು ನಮಗೆ ನೀವು ಅಧಿಕಾರ ನೀಡುತ್ತೀರಿ.

9. ಪುನರಾವರ್ತನೆಯ ಪಾವತಿಗಳು. ನೀವು ಉತ್ಪನ್ನಗಳು, ಸೇವೆಗಳು ಅಥವಾ ವಿಷಯವನ್ನು ಚಂದಾದಾರಿಕೆ ಆಧಾರದಲ್ಲಿ (ಉದಾ. ವಾರದ, ತಿಂಗಳಿನ, ಪ್ರತಿ 3 ತಿಂಗಳುಗಳ ಅಥವಾ ವಾರ್ಷಿಕವಾಗಿ (ಅನ್ವಯಿಸಿದ ಪ್ರಕಾರ)) ಖರೀದಿಸಿದರೆ, ನೀವು ಪುನರಾವರ್ತನೆಯ ಪಾವತಿಗೆ ಅಧಿಕಾರ ನೀಡುತ್ತಿರುವಿರಿ ಎಂದಾಗಿ ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ ಮತ್ತು Microsoft ಗೆ ಪಾವತಿಯನ್ನು ನೀವು ಆರಿಸಿಕೊಂಡಿರುವ ಪುನರಾವರ್ತನೆಯ ಮಧ್ಯಂತರಗಳಲ್ಲಿ, ನೀವು ಅಥವಾ Microsoft ಚಂದಾದಾರಿಕೆಯನ್ನು ಕೊನೆಗೊಳಿಸುವ ತನಕ ಅಥವಾ ಅದರ ನಿಯಮಗಳ ಪ್ರಕಾರ ನೀವು ಆರಿಸಿಕೊಂಡಿರುವ ವಿಧಾನದ ಮೂಲಕ ಮಾಡಲಾಗುತ್ತದೆ. ಪುನರಾವರ್ತನೆಯ ಪಾವತಿಗಳಿಗೆ ಅಧಿಕಾರ ನೀಡುವ ಮೂಲಕ, ಅಂತಹ ಪಾವತಿಯನ್ನು ಎಲೆಕ್ಟ್ರಾನಿಕ್ ಡೆಬಿಟ್‌ಗಳು ಅಥವಾ ಫಂಡ್ ವರ್ಗಾವಣೆಗಳಾಗಿ ಅಥವಾ ನಿಮ್ಮ ನಿಯೋಜಿತ ಖಾತೆಯಿಂದ ಎಲೆಕ್ಟ್ರಾನಿಕ್ ಕರಡುಗಳಾಗಿ (ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ಅಥವಾ ಅಂತಹುದೇ ಪಾವತಿಗಳ ಸಂದರ್ಭದಲ್ಲಿ) ಅಥವಾ ನಿಮ್ಮ ನಿಯೋಜಿತ ಖಾತೆಗೆ ಶುಲ್ಕಗಳಾಗಿ (ಕ್ರೆಡಿಟ್ ಕಾರ್ಡ್ ಅಥವಾ ಅಂತಹುದೇ ಪಾವತಿಗಳ ಸಂದರ್ಭದಲ್ಲಿ) (ಒಟ್ಟಾರೆಯಾಗಿ "ಎಲೆಕ್ಟ್ರಾನಿಕ್ ಪಾವತಿಗಳು") ಪ್ರಕ್ರಿಯೆಗೊಳಿಸಲು ನೀವು Microsoft ಗೆ ಅಧಿಕಾರ ನೀಡುತ್ತಿರುವಿರಿ. ಚಂದಾದಾರಿಕೆ ಶುಲ್ಕಗಳನ್ನು ಸಾಮಾನ್ಯವಾಗಿ ಅನ್ವಯಿಸುವ ಚಂದಾದಾರಿಕೆ ಅವಧಿಗೆ ಮುಂಚಿತವಾಗಿ ಬಿಲ್ ಮಾಡಲಾಗುತ್ತದೆ ಅಥವಾ ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ ಯಾವುದೇ ಪಾವತಿಯು ಪಾವತಿಯಾಗದೇ ಹಿಂತಿರುಗಿದರೆ ಅಥವಾ ಯಾವುದೇ ಕ್ರೆಡಿಟ್ ಕಾರ್ಡ್ ಅಥವಾ ಅಂತಹುದೇ ವಹಿವಾಟು ತಿರಸ್ಕೃತಗೊಂಡರೆ ಅಥವಾ ನಿರಾಕರಿಸಲ್ಪಟ್ಟರೆ, Microsoft ಅಥವಾ ಅದರ ಸೇವೆ ನೀಡುಗರು ಯಾವುದೇ ಅನ್ವಯಿಸುವ ಹಿಂತಿರುಗಿಸುವಿಕೆ ಐಟಂ, ತಿರಸ್ಕಾರ ಅಥವಾ ಇತರ ಶುಲ್ಕಗಳನ್ನು ಅನ್ವಯಿಸುವ ಕಾನೂನು ಅನುಮತಿಸಿದಂತೆ ಸಂಗ್ರಹಿಸುವ ಹಕ್ಕನ್ನು ಕಾಯ್ದಿರಿಸುತ್ತಾರೆ.

10. ಉತ್ಪನ್ನ ಲಭ್ಯತೆ ಮತ್ತು ಪ್ರಮಾಣ ಮತ್ತು ಆರ್ಡರ್ ಮಿತಿಗಳು. ಉತ್ಪನ್ನ ದರಗಳು ಮತ್ತು ಲಭ್ಯತೆಯು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸೂಚನೆ ಇಲ್ಲದೆಯೇ ಬದಲಾವಣೆಗೆ ಒಳಪಟ್ಟಿರುತ್ತದೆ. ಪ್ರತಿ ಆರ್ಡರ್, ಪ್ರತಿ ಖಾತೆ, ಪ್ರತಿ ಕ್ರೆಡಿಟ್ ಕಾರ್ಡ್, ಪ್ರತಿ ವ್ಯಕ್ತಿ ಅಥವಾ ಪ್ರತಿ ಮನೆಗೆ ಖರೀದಿಸಬಹುದಾದ ಪ್ರಮಾಣಗಳ ಮೇಲೆ Microsoft ಮಿತಿಯನ್ನು ಹೇರಬಹುದು. ನೀವು ಆರ್ಡರ್ ಮಾಡಿದ ಉತ್ಪನ್ನಗಳು ಅಥವಾ ಸೇವೆಗಳು ಲಭ್ಯವಿಲ್ಲದೇ ಇದ್ದರೆ, ನಿಮಗೆ ಪರ್ಯಾಯ ಉತ್ಪನ್ನವನ್ನು ನೀಡುವುದಕ್ಕಾಗಿ ನಿಮ್ಮನ್ನು ನಾವು ಸಂಪರ್ಕಿಸಬಹುದು. ನೀವು ಪರ್ಯಾಯ ಉತ್ಪನ್ನವನ್ನು ಖರೀದಿಸಲು ಆರಿಸಿಕೊಳ್ಳದೇ ಇದ್ದರೆ, ನಾವು ನಿಮ್ಮ ಆರ್ಡರ್ ಅನ್ನು ರದ್ದುಗೊಳಿಸುತ್ತೇವೆ.

Microsoft ಯಾವುದೇ ಸಮಯದಲ್ಲಿ ಯಾವುದೇ ಆರ್ಡರ್ ಅನ್ನು ನಿರಾಕರಿಸಬಹುದು ಅಥವಾ ತಿರಸ್ಕರಿಸಬಹುದು, ಈ ಮೂಲಕ ಆರ್ಡರ್‌ಗೆ ನೀವು ಪಾವತಿಸಿದ ಯಾವುದೇ ಹಣಗಳನ್ನು ಮರುಪಾವತಿ ಮಾಡಬಹುದು, ಕಾರಣಗಳಲ್ಲಿ ಇವುಗಳನ್ನು ಒಳಗೊಂಡಿರಬಹುದು ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ, ಆರ್ಡರ್ ಸಮಯದಲ್ಲಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ನೀವು ಪೂರೈಸದೇ ಇದ್ದರೆ, ನಿಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸಲಾಗದೇ ಇದ್ದರೆ, ಆರ್ಡರ್ ಮಾಡಿದ ಉತ್ಪನ್ನಗಳು ಅಥವಾ ಸೇವೆಗಳು ಲಭ್ಯವಿಲ್ಲದೇ ಇದ್ದರೆ ಅಥವಾ ದರ ಅಥವಾ ಇತರ ದೋಷಗಳು. ದರ ಅಥವಾ ಇತರ ಕಾರಣಗಳ ಸಂದರ್ಭದಲ್ಲಿ, ನಮ್ಮ ವಿವೇಚನೆಯಲ್ಲಿ ಹಕ್ಕನ್ನು ನಾವು ಇವುಗಳಿಗೆ ಕಾಯ್ದಿರಿಸುತ್ತೇವೆ (a) ನಿಮ್ಮ ಆರ್ಡರ್ ಅಥವಾ ಖರೀದಿಯನ್ನು ರದ್ದುಮಾಡುವುದು ಅಥವಾ (b) ಸೂಚನೆಗಳಿಗೆ ನಿಮ್ಮನ್ನು ಸಂಪರ್ಕಿಸುವುದು. ರದ್ಧತಿಯ ಸಂದರ್ಭದಲ್ಲಿ, ಸಂಬಂಧಿತ ವಿಷಯಕ್ಕೆ ನಿಮ್ಮ ಪ್ರವೇಶವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಯಾವುದೇ ಕಾರಣಕ್ಕೆ ನಿಮ್ಮ ಖಾತೆಯೊಂದಿಗೆ ಸಂಬಂಧಿತವಾದ ವಿಷಯಕ್ಕೆ ಪ್ರವೇಶವನ್ನು ನಾವು ನಿಷ್ಕ್ರಿಯಗೊಳಿಸಬಹುದು. ಸ್ಟೋರ್ ಅಥವಾ ಸಂಭಾವ್ಯವಾಗಿ ಪರಿಣಾಮಕ್ಕೊಳಗಾಗಿರುವ ವ್ಯಕ್ತಿಗಳನ್ನು ರಕ್ಷಿಸುವುದಕ್ಕಾಗಿ ನಿಮ್ಮ ಸಾಧನದಲ್ಲಿರುವ ಆಟಗಳು, ಅಪ್ಲಿಕೇಶನ್‌ಗಳು, ವಿಷಯ ಅಥವಾ ಸೇವೆಗಳನ್ನು ಸಹ ನಾವು ತೆಗೆದುಹಾಕಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಕೆಲವು ವಿಷಯ ಮತ್ತು ಅಪ್ಲಿಕೇಶನ್‌ಗಳು ಸಮಯದಿಂದ ಸಮಯಕ್ಕೆ ಲಭ್ಯವಿರದೇ ಇರಬಹುದು ಅಥವಾ ಸೀಮಿತ ಸಮಯದವರೆಗೆ ಪರಿಣಾಮಕ್ಕೊಳಗಾಗಬಹುದು. ಲಭ್ಯತೆಯು ಪ್ರಾಂತ್ಯದ ಪ್ರಕಾರ ಪರಿಣಾಮಕ್ಕೊಳಗಾಗಬಹುದು. ಈ ಮೂಲಕ, ನಿಮ್ಮ ಖಾತೆ ಅಥವಾ ಸಾಧನವನ್ನು ಮತ್ತೊಂದು ಪ್ರಾಂತ್ಯಕ್ಕೆ ನೀವು ಬದಲಿಸಿದರೆ, ನಿಮಗೆ ವಿಷಯ ಅಥವಾ ಅಪ್ಲಿಕೇಶನ್‌ಗಳನ್ನು ಮರು-ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ನೀವು ಖರೀದಿಸಿದ ಕೆಲವು ವಿಷಯವನ್ನು ಮರು-ಸ್ಟ್ರೀಮ್ ಮಾಡಲು ಸಾಧ್ಯವಾಗುವುದಿಲ್ಲ; ನಿಮ್ಮ ಹಿಂದಿನ ಪ್ರಾಂತ್ಯದಲ್ಲಿ ನೀವು ಪಾವತಿಸಿದ ವಿಷಯ ಅಥವಾ ಅಪ್ಲಿಕೇಶನ್‌ಗಳನ್ನು ನೀವು ಮರು-ಖರೀದಿಸಬೇಕಾಗಬಹುದು. ಅನ್ವಯಿಸುವ ಕಾನೂನಿಗೆ ಅಗತ್ಯವಾಗುವ ಮಟ್ಟವನ್ನು ಹೊರತುಪಡಿಸಿ, ನೀವು ಖರೀದಿಸುವ ಯಾವುದೇ ವಿಷಯ ಅಥವಾ ಅಪ್ಲಿಕೇಶನ್‌ನ ಮರು-ಡೌನ್‌ಲೋಡ್ ಅಥವಾ ಬದಲಾಯಿಸುವಿಕೆಯನ್ನು ಒದಗಿಸಲು ನಾವು ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ.

11. ಪರಿಷ್ಕರಣೆಗಳು. ಅನ್ವಯಿಸಿದರೆ, ನೀವು ಸ್ಟೋರ್‌ಗೆ ಸೈನ್ ಇನ್ ಆಗಿಲ್ಲದಿದ್ದರೂ ಕೂಡ Microsoft ನಿಮ್ಮ ಅಪ್ಲಿಕೇಶನ್‌ಗಳಿಗಾಗಿ ಪರಿಷ್ಕರಣೆಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ ಮತ್ತು ಅವುಗಳನ್ನು ಡೌನ್‌ಲೋಡ್ ಮಾಡುತ್ತದೆ. ಸ್ಟೋರ್ ಅಪ್ಲಿಗಳಿಗೆ ಸ್ವಯಂಚಾಲಿತ ಪರಿಷ್ಕರಣೆಗಳನ್ನು ಸ್ವೀಕರಿಸಲು ನೀವು ಬಯಸದೇ ಇದ್ದರೆ ನಿಮ್ಮ ಸೆಟ್ಟಿಂಗ್‌ಗಳನ್ನು ನೀವು ಬದಲಿಸಬಹುದು. ಆದಾಗ್ಯೂ, ಪೂರ್ಣವಾಗಿ ಅಥವಾ ಭಾಗಶಃವಾಗಿ ಆನ್‌ಲೈನ್‌ನಲ್ಲಿ ಹೋಸ್ಟ್ ಆಗಿರುವ ಕೆಲವೊಂದು Office ಸ್ಟೋರ್ ಅಪ್ಲಿಗಳನ್ನು ಯಾವುದೇ ಸಮಯದಲ್ಲಿ ಅಪ್ಲಿ ಡೆವಲಪರ್‌ಗಳು ಪರಿಷ್ಕರಿಸಬಹುದಾಗಿದೆ ಮತ್ತು ಪರಿಷ್ಕರಣೆಗೆ ನಿಮ್ಮ ಅನುಮತಿಯ ಅಗತ್ಯವಿಲ್ಲದಿರಬಹುದು.

12. ಸಾಫ್ಟ್‌ವೇರ್ ಪರವಾನಗಿಗಳು ಮತ್ತು ಬಳಕೆಯ ಹಕ್ಕುಗಳು. ಸ್ಟೋರ್ ಮೂಲಕ ಲಭ್ಯವಿರುವ ಸಾಫ್ಟ್‌ವೇರ್ ಮತ್ತು ಇತರ ಡಿಜಿಟಲ್ ವಿಷಯವು ಪರವಾನಗಿಗೆ ಒಳಪಟ್ಟಿದೆ, ನಿಮಗೆ ಮಾರಾಟ ಮಾಡಲಾಗುವುದಿಲ್ಲ. ಅಪ್ಲಿಕೇಶನ್ ಜೊತೆಗೆ ಬೇರೆ ಪರವಾನಗಿ ನಿಯಮಗಳನ್ನು ಒದಗಿಸದ ಹೊರತು, ನೇರವಾಗಿ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳು [https://go.microsoft.com/fwlink/p/?linkid=838610&clcid=0x044b] ನಲ್ಲಿ ಲಭ್ಯವಿರುವ ಪ್ರಮಾಣಿತ ಅಪ್ಲಿಕೇಶನ್ ಪರವಾನಗಿ ನಿಯಮಗಳಿಗೆ ("SALT") ಒಳಪಟ್ಟಿರುತ್ತವೆ. (Office ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳು SALT ನಿಂದ ನಿಯಂತ್ರಸಲ್ಪಡುವುದಿಲ್ಲ ಮತ್ತು ಇವುಗಳು ಪ್ರತ್ಯೇಕ ಪರವಾನಗಿ ನಿಯಮಗಳನ್ನು ಹೊಂದಿರುತ್ತವೆ.) ಸ್ಟೋರ್‌ನಿಂದ ಪಡೆದುಕೊಂಡ ಅಪ್ಲಿಗಳು, ಆಟಗಳು ಮತ್ತು ಇತರ ಡಿಜಿಟಲ್ ವಿಷಯವು https://go.microsoft.com/fwlink/p/?LinkId=723143 ನಲ್ಲಿ ಇರುವ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಡಿಜಿಟಲ್ ಸರಕುಗಳಿಗೆ ಸಂಬಂಧಿಸಿದಂತೆ ನಿಮ್ಮ ಹಕ್ಕುಗಳು ಈ ಮಾರಾಟದ ನಿಯಮಗಳು, ಕೃತಿಸ್ವಾಮ್ಯ ಕಾನೂನು, ಮತ್ತು ಮೇಲೆ ಉಲ್ಲೇಖಿಸಲಾಗಿರುವ ಬಳಕೆಯ ನಿಯಮಗಳಿಂದ ಮಿತಿಗೊಳಪಟ್ಟಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ಒಪ್ಪುತ್ತೀರಿ. Microsoft ರಿಟೇಲ್ ಸ್ಟೋರ್‌ನಲ್ಲಿ ಖರೀದಿಸಲಾದ ಸಾಫ್ಟ್‌ವೇರ್ ಪರವಾನಗಿಗಳು ಸಾಫ್ಟ್‌ವೇರ್ ಜೊತೆಗೆ ಬರುವ ಪರವಾನಗಿ ಒಪ್ಪಂದಕ್ಕೆ ಒಳಪಟ್ಟಿರುತ್ತದೆ ಮತ್ತು ಸಾಫ್ಟ್‌ವೇರ್ ಅನ್ನು ನೀವು ಸ್ಥಾಪನೆಗೊಳಿಸಿದಾಗ ಪರವಾನಗಿ ಒಪ್ಪಂದಕ್ಕೆ ನೀವು ಒಪ್ಪಬೇಕಾಗುತ್ತದೆ. ಸಂಬಂಧಿತ ಪರವಾನಗಿ ನಿಯಮಗಳು, ಬಳಕೆಯ ನಿಯಮಗಳು ಮತ್ತು ಅನ್ವಯಿಸುವ ಕಾನೂನಿನ ಪ್ರಕಾರ ಇಲ್ಲದಿರುವ ಸಾಫ್ಟ್‌ವೇರ್ ಮರ್ಚೆಂಡೈಸ್‌ನ ಯಾವುದೇ ಪ್ರತಿ ಮಾಡುವಿಕೆ ಅಥವಾ ಮರುವಿತರಣೆ ಮಾಡುವಿಕೆಯನ್ನು ಸುವ್ಯಕ್ತವಾಗಿ ನಿಷೇಧಿಸಲಾಗಿದೆ ಮತ್ತು ಇದು ತೀವ್ರ ಸಿವಿಲ್ ಮತ್ತು ಕ್ರಿಮಿನಲ್ ದಂಡಗಳಿಗೆ ಕಾರಣವಾಗಬಹುದು. ಉಲ್ಲಂಘಿಸುವವರು ಕಾನೂನಿನ ಗರಿಷ್ಠ ಮಟ್ಟದವರೆಗಿನ ಶಿಕ್ಷೆಯ ಅಪಾಯ ಹೊಂದಿರುತ್ತಾರೆ.

ನೀವು ಯಾವುದೇ ಸಾಫ್ಟ್‌ವೇರ್ ಪ್ಯಾಕೇಜಿಂಗ್ ತೆರೆಯುವ ಮುನ್ನ, ಯಾವುದೇ ವೆಚ್ಚವಿಲ್ಲದೆಯೇ, ಬಾಕ್ಸ್ ಮಾಡಲ್ಪಟ್ಟ ಸಾಫ್ಟ್‌ವೇರ್‌ಗಾಗಿ ಅನ್ವಯಿಸುವ ಪರವಾನಗಿ ಒಪ್ಪಂದದ ಪ್ರತಿಯನ್ನು ಬಯಸಿದರೆ, ದಯವಿಟ್ಟು MICROSOFT ರಿಟೇಲ್ ಸ್ಟೋರ್ ಅನ್ನು (ಕೆಳಗಿನ ಸೂಚನೆಗಳು ಮತ್ತು ಸಂವಹನ ವಿಭಾಗದಲ್ಲಿ ವಿವರಿಸಲಾಗಿರುವಂತೆ) ಸಂಪರ್ಕಿಸಿ.

ಇತರ ನಿಯಮಗಳು ಮತ್ತು ಷರತ್ತುಗಳು. ಸಾಫ್ಟ್‌ವೇರ್ ಮತ್ತು ಇತರ ಡೌನ್‌ಲೋಡ್ ಮಾಡಬಹುದಾದ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ, ಸ್ಟೋರ್‌ನಲ್ಲಿ ಖರೀದಿ ಅಥವಾ ಪ್ರಯೋಗಕ್ಕೆ ಲಭ್ಯವಿರುವ ಇತರ ಉತ್ಪನ್ನಗಳು ಮತ್ತು ಸೇವೆಗಳನ್ನು ಸಹ ನಿಮಗೆ ಪ್ರತ್ಯೇಕ ಅಂತಿಮ ಬಳಕೆದಾರ ಪರವಾನಗಿ ಒಪ್ಪಂದಗಳು, ಬಳಕೆಯ ನಿಯಮಗಳು ಅಥವಾ ಇತರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ನೀಡಲಾಗಬಹುದು. ನೀವು ಆ ಉತ್ಪನ್ನಗಳನ್ನು ಖರೀದಿಸಿದರೆ ಅಥವಾ ಬಳಸಿದರೆ, ಖರೀದಿ, ಸ್ಥಾಪನೆ ಅಥವಾ ಬಳಕೆಯ ಷರತ್ತಾಗಿ ಆ ನಿಯಮಗಳನ್ನೂ ಸಹ ಒಪ್ಪಬೇಕಾಗಬಹುದು.

ನಿಮ್ಮ ಅನುಕೂಲತೆಗಾಗಿ, ಸ್ಟೋರ್‌ ಅಥವಾ ಸೇವೆಗಳ ಭಾಗ ಅಥವಾ ಅದರ ಸಾಫ್ಟ್‌ವೇರ್ ಅಥವಾ ಮರ್ಚೆಂಡೈಸ್, ಪರಿಕರಗಳು ಮತ್ತು ಯುಟಿಲಿಟಿಗಳನ್ನು ಬಳಕೆಗಾಗಿ ಮತ್ತು/ಅಥವಾ ಮಾರಾಟವಾದ ಉತ್ಪನ್ನ ಅಥವಾ ಸೇವೆಯ ಭಾಗವಾಗಿಲ್ಲದಿರುವುಗಳ ಡೌನ್‌ಲೋಡ್ ಅನ್ನು MICROSOFT ಲಭ್ಯವಾಗಿಸಬಹುದು. ಕಾನೂನು ಅನುಮತಿಸುವ ಮಟ್ಟದವರೆಗೆ, ಅಂತಹ ಯಾವುದೇ ಪರಿಕರಗಳು ಅಥವಾ ಯುಟಿಲಿಟಗಳ ಫಲಿತಾಂಶಗಳ ನಿಖರತೆ ಅಥವಾ ಔಟ್‌ಪುಟ್‌ಗೆ ಸಂಬಂಧಿಸಿದಂತೆ MICROSOFT ಯಾವುದೇ ಪ್ರಾತಿನಿಧ್ಯತೆಗಳನ್ನು, ವಾರಂಟಿಗಳನ್ನು ಅಥವಾ ಖಾತ್ರಿಗಳನ್ನು ಮಾಡುವುದಿಲ್ಲ.

ಸ್ಟೋರ್‌ನಿಂದ ಅಥವಾ ಸಾಫ್ಟ್‌ವೇರ್ ಅಥವಾ ಮರ್ಚೆಂಡೈಸ್‌ನಲ್ಲಿ ಲಭ್ಯವಾಗುವಂತೆ ಮಾಡುವ ಪರಿಕರಗಳು ಮತ್ತು ಯುಟಿಲಿಟಗಳ ಬಳಕೆ ಮಾಡುವಾಗ ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ದಯವಿಟ್ಟು ಗೌರವಿಸಿ.

13. ಸಾಫ್ಟ್‌ವೇರ್ ಮತ್ತು ವಿಷಯ ಡೌನ್‌ಲೋಡ್‌ಗಳಿಗೆ ನಿಯಮಾವಳಿಗಳು. ಕೆಲವು ಸಾಫ್ಟ್‌ವೇರ್ ಮತ್ತು ವಿಷಯವನ್ನು ನಿಮಗೆ ನಿಮ್ಮ ಖರೀದಿಯ ಜೊತೆಗೆ ಸಂಬಂಧಿಸಿದ Microsoft ಖಾತೆಯಲ್ಲಿ ಲಭ್ಯವಿರುವ ಡೌನ್‌ಲೋಡ್ ಲಿಂಕ್ ಲಭ್ಯವಾಗುವಂತೆ ಮಾಡುವ ಮೂಲಕ ವಿತರಿಸಲಾಗುತ್ತದೆ. ಕೆಳಗಿನ ಪ್ಯಾರಾಗ್ರಾಫ್‌ಗೆ ಒಳಪಟ್ಟು, ನಾವು ಸಾಮಾನ್ಯವಾಗಿ ಈ ಖರೀದಿಗಳಿಗೆ ಡೌನ್‌ಲೋಡ್ ಲಿಂಕ್ ಮತ್ತು ಸಂಬಂಧಿತ ಡಿಜಿಟಲ್ ಕೀಲಿಯನ್ನು ಖರೀದಿ ದಿನಾಂಕದಿಂದ 3 ವರ್ಷಗಳವರೆಗೆ ನಿಮ್ಮ Microsoft ಖಾತೆಯಲ್ಲಿ ಸಂಗ್ರಹಿಸುತ್ತೇವೆ, ಆದರೆ ಅವುಗಳನ್ನು ಯಾವುದೇ ನಿರ್ದಿಷ್ಟ ಕಾಲಾವಧಿಗೆ ಸಂಗ್ರಹಿಸುವ ಭರವಸೆ ನೀಡುವುದಿಲ್ಲ. ಡೌನ್‌ಲೋಡ್ ಲಿಂಕ್ ಒದಗಿಸುವ ಮೂಲಕ ವಿತರಿಸಲಾದ ಚಂದಾದಾರಿಕೆ ಉತ್ಪನ್ನಗಳಿಗೆ, ವಿಭಿನ್ನ ನಿಯಮಗಳು ಮತ್ತು ಸಂಗ್ರಹಣೆ ಹಕ್ಕುಗಳು ಅನ್ವಯವಾಗಬಹುದು, ಇವುಗಳನ್ನು ನಿಮಗೆ ನಿಮ್ಮ ಚಂದಾದಾರಿಕೆಯ ಸಮಯದಲ್ಲಿ ಪರಿಶೀಲಿಸಲು ಮತ್ತು ಒಪ್ಪಲು ಸಾಧ್ಯವಾಗುತ್ತದೆ.

ಯಾವುದೇ ಸಮಯದಲ್ಲಿ ನಮ್ಮ ಡಿಜಿಟಲ್ ಕೀಲಿ ಸಂಗ್ರಹ ಪ್ರೋಗ್ರಾಂ ಅನ್ನು ನಾವು ರದ್ದುಗೊಳಿಸಬಹುದು ಅಥವಾ ಮಾರ್ಪಡಿಸಬಹುದು ಎಂಬುದಕ್ಕೆ ನೀವು ಒಪ್ಪುತ್ತೀರಿ. ಉದಾಹರಣೆಗಾಗಿ, ಉತ್ಪನ್ನ ಬೆಂಬಲ ಜೀವಿತಾವಧಿಯ ಮುಕ್ತಾಯದಲ್ಲಿ ಒಳಗೊಂಡು, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಒಂದು ಅಥವಾ ಹೆಚ್ಚಿನ ಉತ್ಪನ್ನಗಳಿಗೆ ಬೆಂಬಲ ಕೀಲಿಗಳನ್ನು ಬೆಂಬಲಿಸುವುದನ್ನು ನಾವು ನಿಲ್ಲಿಸಬಹುದು ಎಂಬುದಕ್ಕೆ ನೀವು ಒಪ್ಪುತ್ತೀರಿ, ಈ ಸಮಯದ ನಂತರ ನೀವು ಡೌನ್‌ಲೋಡ್ ಲಿಂಕ್ ಅಥವಾ ಡಿಜಿಟಲ್ ಕೀಲಿಗೆ ಪ್ರವೇಶವನ್ನು ಹೊಂದಿರುವುದಿಲ್ಲ. ನಿಮ್ಮ ಖಾತೆಯಲ್ಲಿ ಡೌನ್‌ಲೋಡ್ ಲಿಂಕ್ ಅಥವಾ ಡಿಜಿಟಲ್ ಕೀಲಿ(ಗಳಿಗೆ)ಗೆ ನಿಮಗೆ ಇನ್ನು ಪ್ರವೇಶ ಇಲ್ಲದಿರುವಂತೆ ನಮ್ಮ ಪ್ರೋಗ್ರಾಂ ಅನ್ನು ನಾವು ರದ್ದುಗೊಳಿಸಿದರೆ ಅಥವಾ ಮಾರ್ಪಡಿಸಿದರೆ, ಸಂಬಂಧಿತ Microsoft ಖಾತೆಯಲ್ಲಿನ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ಕನಿಷ್ಠ 90 ದಿನಗಳ ಮುಂಚಿತ ಸೂಚನೆಯನ್ನು ನಾವು ನೀಡುತ್ತೇವೆ.

14. ದರ ನಿಗದಿಪಡಿಸುವಿಕೆ. ನಿಮ್ಮ ದೇಶ ಅಥವಾ ಪ್ರಾಂತ್ಯದಲ್ಲಿ ನಮ್ಮ Microsoft ರಿಟೇಲ್ ಸ್ಟೋರ್ ಇದ್ದರೆ, ಅಲ್ಲಿ ನೀಡಲಾಗುವ ದರಗಳು, ಉತ್ಪನ್ನ ಆಯ್ಕೆ ಮತ್ತು ಪ್ರಚಾರಗಳು ಆನ್‌ಲೈನ್ ಸ್ಟೋರ್‌ನಲ್ಲಿರುವುದಕ್ಕಿಂತ ಭಿನ್ನವಾಗಿರಬಹುದು. ಅನ್ವಯಿಸುವ ಕಾನೂನು ಅನುಮತಿಸಿದ ಮಟ್ಟದವರೆಗೆ, ಆನ್‌ಲೈನ್‌ನಲ್ಲಿ ನೀಡಲಾದ ದರ, ಉತ್ಪನ್ನ ಅಥವಾ ಪ್ರಚಾರವು Microsoft ರಿಟೇಲ್ ಸ್ಟೋರ್ ಅಥವಾ ಇದಕ್ಕೆ ತಿರುವು ಮುರುವಾಗಿಯೂ ಸಹ ಲಭ್ಯವಿರುತ್ತದೆ ಅಥವಾ ಅದನ್ನು ಗೌರವಿಸಲಾಗುತ್ತದೆ ಎಂಬುದನ್ನು Microsoft ಖಾತ್ರಿ ನೀಡುವುದಿಲ್ಲ.

ದರ ಹೊಂದಾಣಿಕೆ ಖಾತ್ರಿಯನ್ನು ಸ್ಟೋರ್ ಹೊಂದಿರುವುದಿಲ್ಲ. ಒಂದೇ ಐಟಂಗಳಿಗೆ ಇತರ ರಿಟೇಲರ್‌ಗಳು ನೀಡುವ ಜಾಹಿರಾತು ನೀಡಿದ ದರಕ್ಕೆ ನಾವು ಹೋಲಿಕೆ ಮಾಡುವುದಿಲ್ಲ.

ಕೆಲವು ಉತ್ಪನ್ನಗಳು ಲಭ್ಯವಾಗುವ ದಿನಾಂಕಕ್ಕೂ ಮೊದಲು ಅವುಗಳನ್ನು ಮುಂಚಿತ- ಆರ್ಡರ್ ಮಾಡುವ ಆಯ್ಕೆಯನ್ನು ನಾವು ನೀಡಬಹುದು. ನಮ್ಮ ಮುಂಚಿತ-ಆರ್ಡರ್ ನೀತಿಗಳ ಕುರಿತು ಮತ್ತಷ್ಟು ತಿಳಿಯಲು, ದಯವಿಟ್ಟು ನಮ್ಮ ಮುಂಚಿತ-ಆರ್ಡರ್‌ಗಳು ಪುಟ https://go.microsoft.com/fwlink/p/?linkid=834935&clcid=0x044b ನೋಡಿ.

ಬೇರೆ ರೀತಿಯಾಗಿ ತಿಳಿಸದ ಹೊರತು, ಸ್ಟೋರ್‌ನಲ್ಲಿ ತೋರಿಸಿರುವ ದರಗಳು ನಿಮ್ಮ ಖರೀದಿಗೆ ಅನ್ವಯಿಸಬಹುದಾದ ತೆರಿಗೆಗಳು ಅಥವಾ ಶುಲ್ಕಗಳನ್ನು ("ತೆರಿಗೆಗಳು") ಹೊರತುಪಡಿಸಿರುತ್ತದೆ. ಸ್ಟೋರ್‌ನಲ್ಲಿ ತೋರಿಸಿರುವ ದರಗಳು ವಿತರಣೆ ವೆಚ್ಚಗಳನ್ನೂ ಸಹ ಹೊರತುಪಡಿಸಿರುತ್ತದೆ. ತೆರಿಗೆಗಳು ಮತ್ತು ವಿತರಣೆ ವೆಚ್ಚಗಳನ್ನು (ಅನ್ವಯಿಸಿದ ಪ್ರಕಾರ) ನಿಮ್ಮ ಖರೀದಿಯ ಮೊತ್ತಕ್ಕೆ ಸೇರಿಸಲಾಗುತ್ತದೆ ಮತ್ತು ಚೆಕ್-ಔಟ್ ಪುಟದಲ್ಲಿ ತೋರಿಸಲಾಗುತ್ತದೆ. ಅಂತಹ ತೆರಿಗೆಗಳು ಮತ್ತು ವೆಚ್ಚಗಳನ್ನು ಪಾವತಿಸುವುದಕ್ಕೆ ನೀವು ಏಕೈಕವಾಗಿ ಜವಾಬ್ದಾರರಾಗಿರುತ್ತೀರಿ.

ನಿಮ್ಮ ಸ್ಥಳವನ್ನು ಅವಲಂಬಿಸಿ, ಕೆಲವು ವ್ಯವಹಾರಗಳನ್ನು ಮಾಡಲು ವಿದೇಶಿ ಕರೆನ್ಸಿ ಪರಿವರ್ತನೆಗಳ ಅಗತ್ಯವಿರಬಹುದು ಅಥವಾ ಇನ್ನೊಂದು ದೇಶದಲ್ಲಿ ಪ್ರಕ್ರಿಯೆಗೊಳಪಡಿಸಬೇಕಾಗಬಹುದು. ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದಾಗ ಅಂತಹ ಸೇವೆಗಳಿಗೆ ನಿಮ್ಮ ಬ್ಯಾಂಕ್ ಹೆಚ್ಚುವರಿ ಶುಲ್ಕಗಳನ್ನು ವಿಧಿಸಬಹುದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ಬ್ಯಾಂಕ್ ಸಂಪರ್ಕಿಸಿ.

15. ಸ್ವಯಂಚಾಲಿತ ನವೀಕರಣ ಆಯ್ಕೆ. ನಿಮ್ಮ ದೇಶ, ಪ್ರಾಂತ್ಯ, ಸಂಸ್ಥಾನ/ಪ್ರದೇಶ ಅಥವಾ ರಾಜ್ಯದಲ್ಲಿ ಸ್ವಯಂಚಾಲಿತ ನವೀಕರಣಗಳನ್ನು ಅನುಮತಿಸಲಾಗುತ್ತದೆ ಎಂಬುದನ್ನು ಆಧರಿಸಿ, ಸ್ಥಿರ ಸೇವೆ ಅವಧಿಯ ಮುಕ್ತಾಯದಲ್ಲಿ ಉತ್ಪನ್ನಗಳು ಅಥವಾ ಸೇವೆಗಳು ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದಕ್ಕೆ ನೀವು ಆರಿಸಿಕೊಳ್ಳಬಹುದು. ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಸ್ವಯಂಚಾಲಿತವಾಗಿ ನವೀಕರಿಸುವುದಕ್ಕೆ ನೀವು ಆಯ್ಕೆಮಾಡಿಕೊಂಡಿದ್ದರೆ, ಪ್ರಸ್ತುತ ಸೇವಾ ಅವಧಿಯ ಅಂತ್ಯದಲ್ಲಿ ನಾವು ಉತ್ಪನ್ನ ಅಥವಾ ಸೇವೆಯನ್ನು ಸ್ವಯಂಚಾಲಿತವಾಗಿ ನವೀಕರಿಸಬಹುದು ಮತ್ತು ಕೆಳಗೆ ವಿವರಿಸಿರುವಂತೆ ಉತ್ಪನ್ನ ಅಥವಾ ಸೇವೆಯನ್ನು ರದ್ದು ಮಾಡಲು ನೀವು ಆಯ್ಕೆ ಮಾಡದ ಹೊರತು, ನವೀಕರಣದ ಅವಧಿಗೆ ಅಂದಿನ ಪ್ರಸ್ತುತ ಶುಲ್ಕವನ್ನು ನಿಮಗೆ ನಾವು ವಿಧಿಸಬಹುದಾಗಿದೆ. ನವೀಕರಣಕ್ಕಾಗಿ ಆಯ್ಕೆಮಾಡಿದ ಪಾವತಿ ವಿಧಾನಕ್ಕೆ, ಅದು ನವೀಕರಣ ಅವಧಿಯಲ್ಲಿ ಪ್ರಸ್ತುತವಾಗಿರಲಿ ಅಥವಾ ನಂತರ ಒದಗಿಸಿರಲಿ, ನಾವು ಬಿಲ್ ಮಾಡುತ್ತೇವೆ. ನವೀಕರಣ ದಿನಾಂಕಕ್ಕೂ ಮೊದಲು ಉತ್ಪನ್ನಗಳು ಅಥವಾ ಸೇವೆಯನ್ನು ನೀವು ರದ್ದುಗೊಳಿಸಬಹುದು. ನವೀಕರಣಕ್ಕೆ ಬಿಲ್ ಆಗುವುದನ್ನು ತಪ್ಪಿಸುವುದಕ್ಕಾಗಿ ನವೀಕರಣ ದಿನಾಂಕದ ಮೊದಲೇ ಸೇವೆಗಳನ್ನು ನೀವು ರದ್ದುಗೊಳಿಸಬೇಕು.

16. ಹಿಂತಿರುಗಿಸುವಿಕೆ ನೀತಿ. ಅನ್ವಯಿಸಿದ ಪ್ರಕಾರವಾಗಿ, ಖರೀದಿಸಿದ ಅಥವಾ ಡೌನ್‌ಲೋಡ್ ಮಾಡಿದ ದಿನಾಂಕದಿಂದ 14 ದಿನಗಳವರೆಗೆ ಅರ್ಹ ಉತ್ಪನ್ನಗಳಿಗೆ ನಾವು ಹಿಂತಿರುಗಿಸುವಿಕೆಗೆಳನ್ನು ಮತ್ತು ವಿನಿಮಯಗಳನ್ನು ಸ್ವೀಕರಿಸುತ್ತೇವೆ. ಅರ್ಹ ಉತ್ಪನ್ನವನ್ನು ಹೊಸ ಸ್ಥಿತಿಯಲ್ಲಿರುವಂತೆ ಮತ್ತು ಅದರ ಮೂಲ ಪ್ಯಾಕೇಜಿಂಗ್‌ನಲ್ಲಿ ಮತ್ತು ಮೂಲತಃ ಒಳಗೊಂಡಿದ್ದ ಎಲ್ಲಾ ಬಿಡಿಭಾಗಗಳು, ಘಟಕಗಳು, ಸೂಚನೆ ಕೈಪಿಡಿಗಳ ಜೊತೆಗೆ ಹಿಂತಿರುಗಿಸಿ. ಈ ವಾಪಸಾತಿ ನೀತಿಯು ಅನ್ವಯವಾಗಬಹುದಾದ ಯಾವುದೇ ಶಾಸನಾತ್ಮಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಪ್ಯಾಕೇಜ್ ಮಾಡಿದ ಸಾಫ್ಟ್‌ವೇರ್ ಮತ್ತು ಆಟಗಳನ್ನು ಅವುಗಳ ಮೊಹರುಗಳಿಗೆ ಹಾನಿಯಾಗದೇ ಹಾಗೇ ಇರುವಂತೆ ಹಿಂತಿರುಗಿಸಬೇಕು ಮತ್ತು ಎಲ್ಲಾ ಮಾಧ್ಯಮ ಮತ್ತು ಉತ್ಪನ್ನ ಕೀಲಿಗಳನ್ನು ಒಳಗೊಂಡಿರಬೇಕು. ಸೀಮಿತ ವಿನಾಯಿತಿಯಾಗಿ, ಒಂದು ವೇಳೆ ನೀವು ಪರವಾನಗಿ ಒಪ್ಪಂದವನ್ನು ಒಪ್ಪದೇ ಇದ್ದರೆ, ತೆರೆಯಲಾದ ಸಾಫ್ಟ್‌ವೇರ್ ಮತ್ತು ಆಟದ ಪ್ಯಾಕೇಜ್‌ಗಳನ್ನು ಹಿಂತಿರುಗಿಸುವಿಕೆ ಅವಧಿಯ ಸಮಯದಲ್ಲಿ ಹಿಂತಿರುಗಿಸಬಹುದು, ಆದರೆ ಅವುಗಳ ಯಾವುದೇ ನಕಲುಗಳನ್ನು ನೀವು ಮಾಡಿರಬಾರದು ಅಥವಾ ಬಳಸಿರಬಾರದು.

ಕೆಲವು ಐಟಂಗಳು ಹಿಂತಿರುಗಿಸುವಿಕೆಗೆ ಅರ್ಹವಾಗಿರುವುದಿಲ್ಲ; ಕಾನೂನು ಅಥವಾ ನಿರ್ದಿಷ್ಟ ಉತ್ಪನ್ನ ಕೊಡುಗೆಯು ಒದಗಿಸದ ಹೊರತು, ಈ ಪ್ರಕಾರಗಳ ಉತ್ಪನ್ನಗಳ ಎಲ್ಲಾ ಖರೀದಿಗಳು ಅಂತಿಮವಾಗಿರುತ್ತವೆ ಮತ್ತು ಮರುಪಾವತಿ ಮಾಡಲಾಗುವುದಿಲ್ಲ:

ಡಿಜಿಟಲ್ ಅಪ್ಲಿಗಳು, ಆಟಗಳು, ಅಪ್ಲಿ-ಒಳಗಿನ ವಿಷಯ ಮತ್ತ ಚಂದಾದಾರಿಕೆಗಳು, ಸಂಗೀತ, ಮೂವಿಗಳು, TV ಪ್ರದರ್ಶನಗಳು ಮತ್ತು ಸಂಯೋಜಿತ ವಿಷಯ;

ಉಡುಗೊರೆ ಕಾರ್ಡ್‌ಗಳು ಮತ್ತು ಸೇವೆ/ಚಂದಾದಾರಿಕೆ ಕಾರ್ಡ್‌ಗಳು (e.g., Skype, Xbox Live, Groove Music Pass);

ವೈಯಕ್ತೀಕರಣಗೊಳಿಸಿದ ಅಥವಾ ಗ್ರಾಹಕೀಯಗೊಳಿಸಿದ ಉತ್ಪನ್ನಗಳು;

ಸ್ಟೋರ್ ಪ್ರಚಾರದ ನೀಡುವಿಕೆಯ ಭಾಗವಾಗಿಲ್ಲದ ವಿಶೇಷ ಆರ್ಡರ್ ಉತ್ಪನ್ನಗಳು;

ರಾಂಡಮ್ ಆಕ್ಸೆಸ್ ಮೆಮೋರಿ ("RAM") ಉತ್ಪನ್ನಗಳು;

ಕಾರ್ಯನಿರ್ವಹಿಸಲಾದ ಅಥವಾ ಬಳಸಲಾದ ಸೇವೆಗಳು; ಮತ್ತು

ತೀರುವಳಿ ಐಟಂಗಳು ಅಥವಾ "ಅಂತಿಮ ಮಾರಾಟ" ಅಥವಾ "ಹಿಂತಿರುಗಿಸಲಾಗದೇ ಇರುವುದು" ಎಂಬಂತಹ ಹೆಸರಿನಿಂದ ಗುರುತು ಮಾಡಲಾಗಿರುವವುಗಳು.

ನೀವು ಅರ್ಹ ಹಿಂತಿರುಗಿಸುವಿಕೆ ಮಾಡಿದಾಗ, ಮೂಲ ಶಿಪ್ಪಿಂಗ್ ಮತ್ತು ನಿರ್ವಹಣೆ ಶುಲ್ಕಗಳನ್ನು ಕಡಿತಗೊಳಿಸಿ (ಯಾವುದಾದರೂ ಇದ್ದರೆ) ಪೂರ್ಣ ಮೊತ್ತವನ್ನು ನಾವು ಸಂದಾಯ ಮಾಡುತ್ತೇವೆ ಮತ್ತು ನಿಮ್ಮ ಮರುಪಾವತಿಯನ್ನು ನೀವು ಅಂದಾಜು 3-5 ವ್ಯವಹಾರ ದಿನಗಳಲ್ಲಿ ಸ್ವೀಕರಿಸುತ್ತೀರಿ. ಯಾವುದೇ ಮರುಪಾವತಿಗಳನ್ನು ಅದೇ ಖಾತೆಗೆ, ಆರ್ಡರ್ ಮಾಡಲ ಬಳಸಲಾದ ಅದೇ ಪಾವತಿ ವಿಧಾನವನ್ನು ಬಳಸಿಕೊಂಡು (ಮರುಪಾವತಿ ಮೊತ್ತದಲ್ಲಿ ಸ್ಟೋರ್ ಕ್ರೆಡಿಟ್ ಅನ್ನು ನೀವು ಆರಿಸಿಕೊಳ್ಳದ ಹೊರತು) ಅನ್ವಯಿಸಲಾಗುತ್ತದೆ.

ಅರ್ಹ ಉತ್ಪನ್ನಗಳನ್ನು ಹೇಗೆ ಹಿಂತಿರುಗಿಸುವುದು ಎಂಬ ಕುರಿತಾಗಿ ಸಂಪೂರ್ಣ ವಿವರಗಳಿಗೆ, ನಮ್ಮ ಹಿಂತಿರುಗಿಸುವಿಕೆಗಳು ಮತ್ತು ಮರುಪಾವತಿಗಳ ಪುಟ https://go.microsoft.com/fwlink/p/?linkid=723276&clcid=0x044b ನೋಡಿ.

ನೀವು ತೈವಾನ್‌ನಲ್ಲಿ ವಾಸವಾಗಿದ್ದರೆ, ತೈವಾನ್‌ನ ಗ್ರಾಹಕ ರಕ್ಷಣೆಯ ಕಾಯಿದೆ ಮತ್ತು ಅದರ ಸಂಬಂಧಿತ ನಿಯಮಗಳ ಪ್ರಕಾರ, ಇಂತಹ ವಿಷಯ ಅಥವಾ ಸೇವೆಯನ್ನು ಆನ್‌ಲೈನ್‌ನಲ್ಲಿ ಒದಗಿಸಿದಾಗ ಅಮೂರ್ತ ರೂಪದಲ್ಲಿ ಒದಗಿಸಲಾದ ಡಿಜಿಟಲ್ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಖರೀದಿಗಳು ಮತ್ತು/ಅಥವಾ ಆನ್-ಲೈನ್ ಸೇವೆಗಳು ಅಂತಿಮವಾಗಿರುತ್ತವೆ ಮತ್ತು ಮರುಪಾವತಿಯಾಗುವುದಿಲ್ಲ. ನೀವು ಯಾವುದೇ ಕೂಲಿಂಗ್ ಆಫ್ ಅವಧಿ ಅಥವಾ ಯಾವುದೇ ಮರುಪಾವತಿಯನ್ನು ಪಡೆಯಲು ಅಧಿಕಾರವನ್ನು ಪಡೆದಿರುವುದಿಲ್ಲ.

17. ನಿಮಗೆ ಮಾಡುವ ಪಾವತಿಗಳು.ನಾವು ನಿಮಗೆ ಪಾವತಿಸುವುದಿದ್ದಲ್ಲಿ, ಆಗ ನಿಮಗೆ ಪಾವತಿಯನ್ನು ನಾವು ಮಾಡಲಾಗುವಂತೆ ಅಗತ್ಯವಾಗಿರುವ ಯಾವುದೇ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಮತ್ತು ನಿಖರವಾಗಿ ನೀಡುತ್ತೀರೆಂದು ಒಪ್ಪುತ್ತೀರಿ. ನಿಮಗೆ ಮಾಡಲಾಗುವ ಈ ಪಾವತಿಯ ಕಾರಣದಿಂದ ಉಂಟಾಗಬಹುದಾದ ಯಾವುದೇ ತೆರಿಗೆಗಳು ಮತ್ತು ಶುಲ್ಕಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ಅನ್ವಯಿಸುವ ಕಾನೂನು ಅನುಮತಿಸುವ ಮಟ್ಟಿಗೆ, ಯಾವುದೇ ಪಾವತಿಗೆ ನಿಮ್ಮ ಹಕ್ಕಿನ ಮೇಲೆ ನಾವು ಇರಿಸುವ ಇತರ ಯಾವುದೇ ಷರತ್ತುಗಳನ್ನು ಸಹ ನೀವು ಅನುಸರಿಸಬೇಕು. ನೀವು ದೋಷದಲ್ಲಿ ಪಾವತಿಯನ್ನು ಸ್ವೀಕರಿಸಿದ್ದರೆ, ನಾವು ಹಿಂತಿರುಗಿಸಬಹುದು ಅಥವಾ ಪಾವತಿಯ ಹಿಂತಿರುಗಿಸುವಿಕೆಯ ಅಗತ್ಯವಾಗಬಹುದು. ಇದನ್ನು ಮಾಡುವಲ್ಲಿ ನಮ್ಮೊಂದಿಗೆ ಸಹಕರಿಸಲು ನೀವು ಒಪ್ಪುತ್ತೀರಿ. ಯಾವುದೇ ಹಿಂದಿನ ಅಧಿಕಪಾವತಿಗೆ ಸರಿಹೊಂದಿಸುವುದಕ್ಕಾಗಿ ಯಾವುದೇ ಸೂಚನೆ ಇಲ್ಲದೆಯೇ ನಿಮಗೆ ಮಾಡುವ ಪಾವತಿಯನ್ನು ನಾವು ಕಡಿಮೆಗೊಳಿಸಬಹುದು.

18. ಉಡುಗೊರೆ ಕಾರ್ಡ್‌ಗಳು. Microsoft ರಿಟೇಲ್ ಸ್ಟೋರ್‌ನಲ್ಲಿ ಖರೀದಿಸಿದ ಉಡುಗೊರೆ ಕಾರ್ಡ್‌ಗಳು https://www.microsoftstore.com/store/msusa/html/pbPage.Help_Retail_Stores#GiftCards ನಲ್ಲಿ ಇರುವ ರಿಟೇಲ್ ಉಡುಗೊರೆ ಕಾರ್ಡ್ ಒಪ್ಪಂದದಿಂದ ನಿಯಂತ್ರಿಸಲ್ಪಡುತ್ತದೆ.

Skype ಉಡುಗೊರೆ ಕಾರ್ಡ್‌ಗಳ ಕುರಿತಾದ ಮಾಹಿತಿಯು Skype ನ ಸಹಾಯ ಪುಟದಲ್ಲಿ (https://support.skype.com/en/faq/FA12197/what-is-a-skype-gift-card-and-where-can-i-buy-one) ಲಭ್ಯವಿದೆ.

ಮರುಪಡೆಯುವಿಕೆ ಮತ್ತು ಇತರ Microsoft ಉಡುಗೊರೆ ಕಾರ್ಡ್‌ಗಳ ಬಳಕೆಯು Microsoft ಉಡುಗೊರೆ ಕಾರ್ಡ್ ನಿಯಮಗಳು ಮತ್ತು ಷರತ್ತುಗಳಿಂದ (https://commerce.microsoft.com/PaymentHub/Help/Show/toc_link_no_62) ನಿಯಂತ್ರಿಸಲ್ಪಡುತ್ತದೆ.

19. ಗ್ರಾಹಕ ಸೇವೆ. ಗ್ರಾಹಕ ಸೇವೆ ಆಯ್ಕೆಗಳ ಕುರಿತು ಹೆಚ್ಚಿನ ಮಾಹಿತಿಗೆ ದಯವಿಟ್ಟು ನಮ್ಮ ಮಾರಾಟಗಳು ಮತ್ತು ಬೆಂಬಲ ಪುಟ https://go.microsoft.com/fwlink/p/?linkid=824761&clcid=0x044b ಕ್ಕೆ ದಯವಿಟ್ಟು ಭೇಟಿ ನೀಡಿ.

ಸಾಮಾನ್ಯ ನಿಯಮಗಳು

20. ನಿಯಮಗಳ ಬದಲಾಯಿಸುವಿಕೆ. ಮಾರಾಟದ ನಿಯಮಗಳನ್ನು Microsoft ಯಾವುದೇ ಸಮಯದಲ್ಲಿ ಮತ್ತು ನಿಮಗೆ ಸೂಚನೆಯನ್ನು ನೀಡದೆಯೇ ಬದಲಿಸಬಹುದು. ನೀವು ಆರ್ಡರ್ ಮಾಡುವ ಸಮಯದಲ್ಲಿ ಜಾರಿಯಲ್ಲಿರುವ ಮಾರಾಟದ ನಿಯಮಗಳು ನಿಮ್ಮ ಖರೀದಿಯನ್ನು ನಿಯಂತ್ರಿಸುತ್ತದೆ ಮತ್ತು ನಮ್ಮ ನಡುವಿನ ಖರೀದಿ ಒಪ್ಪಂದವಾಗಿರುತ್ತದೆ. ನಿಮ್ಮ ಮುಂದಿನ ಖರೀದಿಯ ಮೊದಲು, ನಿಮಗೆ ಸೂಚನೆಯನ್ನು ನೀಡದೆಯೇ ಮಾರಾಟದ ನಿಯಮಗಳನ್ನು Microsoft ಬದಲಿಸಿರಬಹುದು. ನೀವು ಪ್ರತಿ ಬಾರಿ ಸ್ಟೋರ್‌ಗೆ ಭೇಟಿ ನೀಡಿದಾಗಲೂ ಮಾರಾಟದ ನಿಯಮಗಳನ್ನು ಪರಿಶೀಲಿಸಿ. ನೀವು ಖರೀದಿಯನ್ನು ಮಾಡಿದಾಗ ಭವಿಷ್ಯದ ಉಲ್ಲೇಖಕ್ಕಾಗಿ ಮಾರಾಟದ ನಿಯಮಗಳನ್ನು ಉಳಿಸುವಂತೆ ಅಥವಾ ಅದರ ಪ್ರತಿಯನ್ನು ಮುದ್ರಿಸುವಂತೆ ನಾವು ಶಿಫಾರಸು ಮಾಡುತ್ತೇವೆ.

21. ವಯಸ್ಸಿನ ಮಿತಿಗಳು. ಖರೀದಿಗಳನ್ನು ಒಳಗೊಂಡು, ಸ್ಟೋರ್‌ನ ನಿಮ್ಮ ಬಳಕೆಗೆ ವಯಸ್ಸಿನ ಮಿತಿಗಳು ಅನ್ವಯಿಸಬಹುದು.

22. ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ರಕ್ಷಣೆ. ನಿಮ್ಮ ಗೌಪ್ಯತೆ ನಮಗೆ ಅತ್ಯಂತ ಮುಖ್ಯ. ಸ್ಟೋರ್ ಕಾರ್ಯನಿರ್ವಹಣೆ ಮಾಡಲು ಮತ್ತು ಒದಗಿಸಲು ನಿಮ್ಮಿಂದ ನಾವು ಸಂಗ್ರಹಿಸುವ ಕೆಲವು ಮಾಹಿತಿಯನ್ನು ನಾವು ಬಳಸುತ್ತೇವೆ. Microsoft ಗೌಪ್ಯತೆ ಹೇಳಿಕೆಯನ್ನು ದಯವಿಟ್ಟು ಓದಿ ಏಕೆಂದರೆ ಇದು ನಿಮ್ಮಿಂದ ಮತ್ತು ನಿಮ್ಮ ಸಾಧನಗಳಿಂದ ನಾವು ಸಂಗ್ರಹಿಸುವ ಡೇಟಾದ ವಿಧಗಳನ್ನು ("ಡೇಟಾ") ಮತ್ತು ನಿಮ್ಮ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ವಿವರಿಸುತ್ತದೆ. ಬೇರೆಯವರೊಂದಿಗೆ ನಿಮ್ಮ ಸಂವಹನಗಳು; ಸ್ಟೋರ್ ಮೂಲಕ Microsoft ಗೆ ನೀವು ಸಲ್ಲಿಸುವ ಪೋಸ್ಟಿಂಗ್‌ಗಳು ಅಥವಾ ಪ್ರತಿಕ್ರಿಯೆ; ಮತ್ತು ನಿಮ್ಮ ಸಾಧನಗಳಲ್ಲಿ ಅಥವಾ ಸ್ಟೋರ್ ಮೂಲಕ ನೀವು ಅಪ್‌ಲೋಡ್ ಮಾಡುವ, ಸಂಗ್ರಹಿಸುವ ಅಥವಾ ಹಂಚುವ ಫೈಲ್‌ಗಳು, ಫೋಟೋಗಳು, ದಾಖಲೆಗಳು, ಆಡಿಯೋ, ಡಿಜಿಟಲ್ ಕೆಲಸಗಳು, ಮತ್ತು ವೀಡಿಯೊಗಳನ್ನು ("ನಿಮ್ಮ ವಿಷಯ") Microsoft ಹೇಗೆ ಬಳಸುತ್ತದೆ ಎಂಬುದನ್ನೂ ಗೌಪ್ಯತೆ ಹೇಳಿಕೆಯು ವಿವರಿಸುತ್ತದೆ. ಸ್ಟೋರ್ ಬಳಸುವ ಮೂಲಕ, ನೀವು ಗೌಪ್ಯತೆ ಹೇಳಿಕೆಯಲ್ಲಿ ವಿವರಿಸಿರುವ ಪ್ರಕಾರ Microsoft ನಿಮ್ಮ ವಿಷಯ ಮತ್ತು ಡೇಟಾದ ಸಂಗ್ರಹಣೆ, ಬಳಕೆ ಮತ್ತು ಬಹಿರಂಗಪಡಿಸುವುದಕ್ಕೆ ನೀವು ಸುವ್ಯಕ್ತವಾಗಿ ಸಮ್ಮತಿಸುತ್ತೀರಿ.

23. ಉತ್ಪನ್ನ ಪ್ರದರ್ಶನ ಮತ್ತು ಬಣ್ಣಗಳು. ಉತ್ಪನ್ನ ಬಣ್ಣಗಳು ಮತ್ತು ಇಮೇಜ್‌ಗಳನ್ನು ನಿಖರವಾಗಿ ಪ್ರದರ್ಶಿಸಲು Microsoft ಪ್ರಯತ್ನಿಸುತ್ತದೆ ಆದರೆ ನಿಮ್ಮ ಸಾಧನ ಪದೆ ಅಥವಾ ಮಾನಿಟರ್‌ನಲ್ಲಿ ನೋಡುವ ಬಣ್ಣವು ಉತ್ಪನ್ನದ ಬಣ್ಣಕ್ಕೆ ಹೊಂದಾಣಿಕೆಯಾಗುತ್ತದೆ ಎಂಬುದರ ಖಾತ್ರಿಯನ್ನು ನಾವು ನೀಡುವುದಿಲ್ಲ.

24. ಸ್ಟೋರ್ ಪ್ರಸ್ತುತಿಯಲ್ಲಿ ದೋಷಗಳು. ನಾವು ಮಾಹಿತಿಯನ್ನು ನಿಖರವಾಗಿ ಪ್ರಕಟಿಸಲು, ಸ್ಟೋರ್ ಅನ್ನು ನಿಯಮಿತವಾಗಿ ಪರಿಷ್ಕರಿಸಲು ಮತ್ತು ದೋಷಗಳು ಕಂಡುಬಂದಾಗ ಅವುಗಳನ್ನು ಸರಿಪಡಿಸಲು ಶ್ರಮಮೀರಿ ಕಾರ್ಯನಿರ್ವಹಿಸುತ್ತೇವೆ. ಆದಾಗ್ಯೂ, ಸ್ಟೋರ್‌ನಲ್ಲಿನ ಯಾವುದೇ ವಿಷಯವು ತಪ್ಪಾಗಿರಬಹುದು ಅಥವಾ ನೀಡಲಾದ ಯಾವುದೇ ಸಮಯದಲ್ಲಿ ಅವಧಿ ಮೀರಿರಬಹುದು. ಉತ್ಪನ್ನದ ದರಗಳು, ನಿರ್ದಿಷ್ಟತೆಗಳು, ಕೊಡುಗೆಗಳು ಮತ್ತು ಲಭ್ಯತೆಯನ್ನು ಒಳಗೊಂಡಂತೆ ಸ್ಟೋರ್‌ಗೆ ಬದಲಾವಣೆಗಳನ್ನು ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

25. ಬಳಕೆ ಅಥವಾ ಪ್ರವೇಶ ಕೊನೆಗೊಳಿಸುವಿಕೆ. ನೀವು ಈ ಮಾರಾಟದ ನಿಯಮಗಳು ಅಥವಾ ಸ್ಟೋರ್ ನೀತಿಗಳ ಉಲ್ಲಂಘನೆಯಲ್ಲಿರುವುದು ಅಥವಾ ಸ್ಟೋರ್ ಅನ್ನು ಇನ್ನು ಮುಂದೆ Microsoft ನಿರ್ವಹಣೆ ಮಾಡದೇ ಇರುವುದನ್ನು ಒಳಗೊಂಡು ಆದರೆ ಇವುಗಳಿಗೆ ಮಿತಿಯಿಲ್ಲದಂತೆ ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ನಿಮ್ಮ ಖಾತೆಯನ್ನು ಅಥವಾ ಸ್ಟೋರ್ ಬಳಕೆಯನ್ನು Microsoft ಕೊನೆಗೊಳಿಸಬಹುದು. ಸ್ಟೋರ್ ಬಳಸುವ ಮೂಲಕ, ನೀವು ಮಾಡುವ ಯಾವುದೇ ಆರ್ಡರ್‌ಗಳು ಅಥವಾ ಅಂತಹ ಕೊನೆಗೊಳಿಸುವಿಕೆಗೆ ಮೊದಲು ನಿಮಗೆ ಉಂಟಾದ ಶುಲ್ಕಗಳಿಗೆ ಜವಾಬ್ದಾರರಾಗಿರಲು (ಈ ನಿಯಮಗಳ ಪ್ರಕಾರವಾಗಿ) ನೀವು ಒಪ್ಪುತ್ತೀರಿ. ಯಾವುದೇ ಸಮಯದಲ್ಲಿ, ಯಾವುದೇ ಕಾರಣಕ್ಕಾಗಿ ಮತ್ತು ನಿಮಗೆ ಮುಂಚಿತ ಸೂಚನೆ ಇಲ್ಲದೆಯೇ ಸ್ಟೋರ್ ಅನ್ನು Microsoft ಬದಲಿಸಬಹುದು, ಸ್ಥಗಿತಗೊಳಿಸಬಹುದು ಅಥವಾ ಇಲ್ಲವೇ ಅಮಾನತುಗೊಳಿಸಬಹುದು.

26. ವಾರಂಟಿಗಳು ಮತ್ತು ಪರಿಹಾರಗಳ ಮಿತಿಗಳು. ನಿಮ್ಮ ಸ್ಥಳೀಯ ಕಾನೂನು ಅನುಮತಿಸುವ ಮಟ್ಟದವರೆಗೆ, MICROSOFT ಮತ್ತು ಅದರ ಪೂರೈಕೆದಾರರು, ವಿತರಕರು, ಮರುಮಾರಾಟಗಾರರು ಮತ್ತು ವಿಷಯ ನೀಡುಗರು ಮರ್ಚೆಂಟಿಬಿಲಿಟಿ, ತೃಪ್ತಿಕರ ಗುಣಮಟ್ಟ, ನಿರ್ದಿಷ್ಟ ಉದ್ದೇಶಕ್ಕೆ ಸಾಮರ್ಥ್ಯ, ಕೆಲಸಗಾರರಂತಹ ಪ್ರಯತ್ನ, ಶೀರ್ಷಿಕೆ ಅಥವಾ ಉಲ್ಲಂಘಿಸದಿರುವಿಕೆಯನ್ನು ಒಳಗೊಂಡಂತೆ ಯಾವುದೇ ಸುವ್ಯಕ್ತವಾದ ಅಥವಾ ವ್ಯಕ್ತಗೊಳಿಸುವ ವಾರಂಟಿಗಳು, ಖಾತ್ರಿಗಳು ಅಥವಾ ಷರತ್ತುಗಳನ್ನು ಮಾಡುವುದಿಲ್ಲ. ಸ್ಟೋರ್‌ನಲ್ಲಿ ಮಾರಾಟ ಮಾಡುವ ಅಥವಾ ಲಭ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳು ಪ್ರಮಾಣೀಕರಿಸಲ್ಪಟ್ಟಿವೆ ಮತ್ತು ಇದ್ದಲ್ಲಿ, ಅವುಗಳೊಂದಿಗೆ ಬರುವ ಯಾವುದೇ ಪರವಾನಗಿ ಒಪ್ಪಂದಗಳು ಅಥವಾ ತಯಾರಕರ ವಾರಂಟಿಗಳ ಅಡಿಯಲ್ಲಿ ಮಾತ್ರ ಬರುತ್ತವೆ. ಜತೆಗೂಡಿದ ಪರವಾನಗಿ ಒಪ್ಪಂದಗಳು ಅಥವಾ ತಯಾರಕರ ವಾರಂಟಿ ಅಡಿಯಲ್ಲಿ ಒದಗಿಸಲಾಗಿರುವುದನ್ನು ಹೊರತುಪಡಿಸಿ ಮತ್ತು ನಿಮ್ಮ ಶಾಸನಬದ್ಧ ಹಕ್ಕುಗಳಿಗೆ ಒಳಪಟ್ಟು:

ನಿಮ್ಮ ಖರೀದಿ ಮತ್ತು ಬಳಕೆಯು ನಿಮ್ಮ ಸ್ವಂತ ಹೊಣೆಗಾರಿಕೆಯಾಗಿದೆ;

ನಾವು ಉತ್ಪನ್ನಗಳು ಮತ್ತು ಸೇವೆಗಳನ್ನು "ಹೇಗಿದೆಯೋ ಹಾಗೆ," "ಎಲ್ಲಾ ದೋಷಗಳೊಂದಿಗೆ" ಮತ್ತು "ಲಭ್ಯವಿರುವಂತೆ" ಒದಗಿಸುತ್ತೇವೆ;

ನೀವು ಅವುಗಳ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಗೆ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತೀರಿ; ಮತ್ತು

ನೀವು ಎಲ್ಲಾ ಅಗತ್ಯ ಸರ್ವೀಸಿಂಗ್ ಅಥವಾ ದುರಸ್ತಿಯ ಸಂಪೂರ್ಣ ವೆಚ್ಚವನ್ನು ವಹಿಸಿಕೊಳ್ಳುತ್ತೀರಿ.

ಸ್ಟೋರ್ ಅಥವಾ ಸೇವೆಗಳಿಂದ ಲಭ್ಯವಿರುವ ಮಾಹಿತಿಯ ನಿಖರತೆಯನ್ನು ಅಥವಾ ಸಕಾಲತೆಯನ್ನು MICROSOFT ಖಾತ್ರಿಪಡಿಸುವುದಿಲ್ಲ. ಕಂಪ್ಯೂಟರ್ ಮತ್ತು ಟೆಲಿಕಮ್ಯುನಿಕೇಶನ್‌ಗಳ ಸಿಸ್ಟಂಗಳು ದೋಷ-ಮುಕ್ತವಾಗಿರುವುದಿಲ್ಲ ಮತ್ತು ಸಾಂದರ್ಭಿಕವಾಗಿ ಡೌನ್‌ಟೈಮ್ ಉಂಟಾಗುತ್ತದೆ ಎಂಬುದನ್ನು ನೀವು ಒಪ್ಪುತ್ತೀರಿ. ಸ್ಟೋರ್ ಅಥವಾ ಸೇವೆಗಳಿಗೆ ಪ್ರವೇಶವು ಅಡ್ಡಿರಹಿತವಾಗಿರುವುದಿಲ್ಲ, ಸಕಾಲಿಕವಾಗಿರುತ್ತದೆ, ಸುರಕ್ಷಿತವಾಗಿರುತ್ತದೆ ಅಥವಾ ದೋಷ-ಮುಕ್ತವಾಗಿರುತ್ತದೆ ಅಥವಾ ಆ ವಿಷಯದ ನಷ್ಟ ಉಂಟಾಗುವುದಿಲ್ಲ ಎಂಬುದಾಗಿ ನಾವು ಪ್ರಮಾಣೀಕರಿಸುವುದಿಲ್ಲ.

ಒಂದು ವೇಳೆ, ಈ ಮಾರಾಟದ ನಿಯಮಗಳ ಹೊರತಾಗಿಯೂ, ಅನ್ವಯಿಸುವ ಕಾನೂನು ಅನುಮತಿಸುವ ಮಟ್ಟದವರೆಗೆ, ಸ್ಟೋರ್, ಸೇವೆಗಳು ಅಥವಾ ಯಾವುದೇ ಉತ್ಪನ್ನ ಅಥವಾ ನೀಡುವ ಸೇವೆಗಳಿಂದ ಉಂಟಾಗುವ ಹಾನಿಗಳಿಗೆ ನಷ್ಟವನ್ನು ತುಂಬಿಕೊಳ್ಳುವ ಯಾವುದೇ ಆಧಾರವನ್ನು ಹೊಂದಿದ್ದರೆ, ನಿಮ್ಮ ಪ್ರತ್ಯೇಕ ಪರಿಹಾರವು Microsoft ಅಥವಾ ಅದರ ಪೂರೈಕೆದಾರರು, ಮರುಮಾರಾಟಗಾರರು, ವಿತರಕರು ಮತ್ತು ವಿಷಯ ನೀಡುಗರಿಂದ ಇಲ್ಲಿಯತನಕ ಒಟ್ಟು ಹಾನಿಗಳನ್ನು ಪಡೆದುಕೊಳ್ಳುವುದಾಗಿದೆ (1) ಯಾವುದೇ ಸೇವೆ, ಚಂದಾದಾರಿಕೆ ಅಥವಾ ಅಂತಹ ಶುಲ್ಕದ ಒಂದು ತಿಂಗಳಿನ ದರ ಅಥವಾ ಶುಲ್ಕ (ಹಾರ್ಡ್‌ವೇರ್, ಸಾಫ್ಟ್‌ವೇರ್, ಬೆಂಬಲ ಅಥವಾ ವಿಸ್ತರಿತ ವಾರಂಟಿಗಳ ಖರೀದಿ ದರವನ್ನು ಸೇರಿಸಿಕೊಳ್ಳದೆಯೇ), ಅಥವಾ (2) ಒಂದು ವೇಳೆ ಯಾವುದೇ ಸೇವೆ, ಚಂದಾದಾರಿಕೆ ಅಥವಾ ಅಂತರ ಶುಲ್ಕವಿಲ್ಲದೇ ಇದ್ದರೆ US $100.00.

ನಿಮ್ಮ ಸ್ಥಳೀಯ ಕಾನೂನಿನ ಅಡಿಯಲ್ಲಿ ಕೆಲವು ಹಕ್ಕುಗಳನ್ನು ನೀವು ಹೊಂದಿರಬಹುದು. ಈ ಗುತ್ತಿಗೆಯಲ್ಲಿನ ಯಾವುದೂ ಸಹ ಆ ಹಕ್ಕುಗಳಿಗೆ, ಒಂದು ವೇಳೆ ಅವುಗಳು ಅನ್ವಯಿಸಿದರೆ ಪರಿಣಾಮ ಬೀರುವುದಿಲ್ಲ.

ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿರುವ ಗ್ರಾಹಕರಿಗೆ, ನೀವು ನ್ಯೂಜಿಲೆಂಡ್ ಗ್ರಾಹಕ ಖಾತ್ರಿಗಳ ಕಾಯಿದೆ ಅಡಿಯಲ್ಲಿ ಶಾಸನಬದ್ಧ ಹಕ್ಕುಗಳನ್ನು ಹೊಂದಿರಬಹುದು ಮತ್ತು ಈ ಮಾರಾಟದ ನಿಯಮಗಳಲ್ಲಿರುವ ಯಾವುದೂ ಈ ಹಕ್ಕುಗಳಿಗೆ ಪರಿಣಾಮ ಬೀರುವ ಉದ್ದೇಶ ಹೊಂದಿಲ್ಲ.

27. ಬಾಧ್ಯತೆಯ ಮಿತಿ. ಅನ್ವಯಿಸುವ ಕಾನೂನು ಅನುಮತಿಸುವ ಮಟ್ಟದವರೆಗೆ, ತತ್ಪರಿಣಾಮದ, ವಿಶೇಷ, ಪರೋಕ್ಷ, ಆಕಸ್ಮಿಕ ಅಥವಾ ಶಿಕ್ಷಾತ್ಮಕ ಹಾನಿಗಳು ಅಥವಾ ನಷ್ಟದ ಲಾಭಗಳನ್ನು ಒಳಗೊಂಡು ಇತರ ಯಾವುದೇ ಹಾನಿಗಳು ಅಥವಾ ನಷ್ಟಗಳನ್ನು ನಿಮಗೆ ಭರ್ತಿ ಮಾಡಿಕೊಳ್ಳಲಾಗುವುದಿಲ್ಲ ಎಂಬುದಾಗಿ ನೀವು ಒಪ್ಪುತ್ತೀರಿ. 26 ಮತ್ತು 27 ನೇ ವಿಭಾಗಗಳಲ್ಲಿರುವ ಮಿತಿಗಳು ಮತ್ತು ಹೊರತುಪಡಿಸುವಿಕೆಗಳು ಒಂದು ವೇಳೆ ನಿಮಗೆ ಹಾನಿ ಉಂಟಾದರೆ ಮತ್ತು ಸಂಭಾವ್ಯ ಹಾನಿಗಳ ಬಗ್ಗೆ ನಮಗೆ ಗೊತ್ತಿದ್ದರೂ ಅಥವಾ ಅದರ ಬಗ್ಗೆ ತಿಳಿದರೂ ಅನ್ವಯಿಸುತ್ತವೆ. ಕೆಲವು ರಾಜ್ಯಗಳು ಅಥವಾ ಸಂಸ್ಥಾನಗಳು/ಪ್ರಾಂತ್ಯಗಳು ಆಕಸ್ಮಿಕ ಅಥವಾ ಪರಿಣಾಮದ ಹಾನಿಗಳ ಹೊರತುಪಡಿಸುವಿಕೆ ಅಥವಾ ಮಿತಿಯನ್ನು ಅನುಮತಿಸುವುದಿಲ್ಲ, ಆದ್ದರಿಂದ ಮೇಲಿನ ಮಿತಿ ಅಥವಾ ಹೊರತುಪಡಿಸುವಿಕೆಯು ನಿಮಗೆ ಅನ್ವಯಿಸದೇ ಇರಬಹುದು.

ಅಥವಾ ಯಾವುದೇ ಉತ್ಪನ್ನ ಅಥವಾ ನೀಡಿದ ಸೇವೆಗೆ ಸಂಬಂಧಿಸಿದಂತೆ ಮಾರಾಟದ ನಿಯಮಗಳು, ಯಾವುದೇ ಕಾನೂನು ವ್ಯಾಖ್ಯೆಯ ಅಡಿಯಲ್ಲಿನ ಎಲ್ಲಾ ಕ್ಲೈಮ್‌ಗಳಿಗೆ ಅನ್ವಯಿಸುತ್ತದೆ, ಇವುಗಳಲ್ಲಿ ವಿಷಯದ ನಷ್ಟ, ಯಾವುದೇ ವೈರಸ್ ಅಥವಾ ಮಾಲ್‌ವೇರ್ ನಿಮ್ಮ ಸ್ಟೋರ್ ಅಥವಾ ಸೇವೆಗಳಿಗೆ ಪರಿಣಾಮ ಬೀರುವುದು ಅಥವಾ ಸ್ಟೋರ್‌ನಿಂದ ಪಡೆದುಕೊಂಡ ಯಾವುದೇ ಉತ್ಪನ್ನ ಅಥವಾ ಸೇವೆ; ಮತ್ತು ಪ್ರಸರಣಗಳು ಅಥವಾ ವಹಿವಾಟುಗಳನ್ನು ಪ್ರಾರಂಭಿಸುವಲ್ಲಿ ಅಥವಾ ಪೂರ್ಣಗೊಳಿಸುವಲ್ಲಿ ವಿಳಂಬಗಳು ಅಥವಾ ವೈಫಲ್ಯಗಳು ಒಳಗೊಂಡಿರುತ್ತದೆ.

28. ಈ ನಿಯಮಗಳ ಅರ್ಥೈಸಿಕೊಳ್ಳುವಿಕೆ.ಈ ಮಾರಾಟದ ನಿಯಮಗಳ ಎಲ್ಲಾ ಭಾಗಗಳು ಸಂಬಂಧಿತ ಕಾನೂನು ಅನುಮತಿಸುವ ಗರಿಷ್ಠ ಮಟ್ಟದವರೆಗೆ ಅನ್ವಯಿಸುತ್ತದೆ; ನೀವು ವಾಸಿಸುವ ನ್ಯಾಯವ್ಯಾಪ್ತಿಯಲ್ಲಿ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ಮುಖ್ಯ ವ್ಯವಹಾರದ ಸ್ಥಳವಾಗಿದ್ದರೆ) ನೀವು ಹೆಚ್ಚಿನ ಹಕ್ಕುಗಳನ್ನು ಹೊಂದಿರಬಹುದು. ಈ ಮಾರಾಟದ ನಿಯಮಗಳ ಒಂದು ಭಾಗವನ್ನು ನಾವು ಲಿಖಿತವಾಗಿ ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ತೀರ್ಮಾನಿಸಿದರೆ, ಸಂಬಂಧಿತ ಕಾನೂನಿನಡಿಯಲ್ಲಿ ಅನುಷ್ಠಾನಯೋಗ್ಯವಾಗುವ ಮಟ್ಟಿಗೆ ನಾವು ಅದೇ ರೀತಿಯ ನಿಯಮಗಳುಳ್ಳ ನಿಯಮಗಳ ಮೂಲಕ ಅವುಗಳನ್ನು ಬದಲಾಯಿಸಬಹುದಾಗಿದೆ, ಆದರೆ ಈ ಮಾರಾಟದ ನಿಯಮಗಳ ಉಳಿದ ಭಾಗಗಳು ಬದಲಾವಣೆಯಾಗುವುದಿಲ್ಲ. ಈ ಮಾರಾಟದ ನಿಯಮಗಳು ಕೇವಲ ನಿಮಗೆ ಮತ್ತು ನಿಮ್ಮ ಪ್ರಯೋಜನಕ್ಕಾಗಿ ಆಗಿದೆ; Microsoft ನ ಉತ್ತರಾಧಿಕಾರಿಗಳು ಮತ್ತು ನಿಯೋಜಿತರಿಗೆ ಹೊರತುಪಡಿಸಿ, ಅವುಗಳು ಇತರ ಯಾವುದೇ ವ್ಯಕ್ತಿಯ ಪ್ರಯೋಜನಕ್ಕಾಗಿ ಇರುವುದಿಲ್ಲ. ನೀವು ಇತರ Microsoft ವೆಬ್‌ಸೈಟ್‌ಗಳಿಂದ ಉತ್ಪನ್ನಗಳು ಅಥವಾ ಸೇವೆಗಳನ್ನು ಖರೀದಿಸಿದರೆ, ಇತರ ನಿಯಮಗಳು ಅನ್ವಯಿಸಬಹುದು.

29. ನಿಯೋಜನೆ.ಅನ್ವಯಿಸುವ ಕಾನೂನು ಅನುಮತಿಸಿದ ಪ್ರಮಾಣದವರೆಗೆ, ಪೂರ್ಣವಾಗಿ ಅಥವಾ ಭಾಗಶಃ, ಯಾವುದೇ ಸಮಯದಲ್ಲಿ ನಿಮಗೆ ಸೂಚನೆ ನೀಡದೇ ನಾವು ಈ ಮಾರಾಟದ ನಿಯಮಗಳ ಅಡಿಯಲ್ಲಿ ನಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿಯೋಜಿಸಬಹುದು, ವರ್ಗಾಯಿಸಬಹುದು ಅಥವಾ ಇಲ್ಲವೇ ಇತ್ಯರ್ಥಗೊಳಿಸಬಹುದು. ಈ ಮಾರಾಟದ ನಿಯಮಗಳ ಅಡಿಯಲ್ಲಿ ಯಾವುದೇ ಹಕ್ಕುಗಳನ್ನು ನೀವು ನಿಯೋಜಿಸಬಾರದು ಅಥವಾ ವರ್ಗಾಯಿಸಬಾರದು.

30. ಸೂಚನೆಗಳು ಮತ್ತು ಸಂವಹನ.ಗ್ರಾಹಕ ಬೆಂಬಲ ವಿಚಾರಣೆಗಳಿಗೆ, ದಯವಿಟ್ಟು ಸ್ಟೋರ್‌ನಲ್ಲಿ ಮಾರಾಟಗಳು ಮತ್ತು ಬೆಂಬಲ ಪುಟವನ್ನು ನೋಡಿ. ವಿವಾದಗಳಿಗೆ, ಈ ವಿಭಾಗದಲ್ಲಿನ ಸೂಚನೆ ಪ್ರಕ್ರಿಯೆಯನ್ನು ಅನುಸರಿಸಿ.

31. ಗುತ್ತಿಗೆಯ ಇರವು, ಕಾನೂನಿನ ಆಯ್ಕೆ ಮತ್ತು ವಿವಾದಗಳನ್ನು ಪರಿಹರಿಸುವ ಸ್ಥಳ.

a. ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾದ ಹೊರಗೆ ಉತ್ತರ ಅಥವಾ ದಕ್ಷಿಣ ಅಮೇರಿಕ.ನೀವು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಹೊರಗೆ ಉತ್ತರ ಅಥವಾ ದಕ್ಷಿಣ ಅಮೇರಿಕದಲ್ಲಿ ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೀವು Microsoft Corporation, One Microsoft Way, Redmond, WA 98052, U.S.A ಜೊತೆ ಗುತ್ತಿಗೆಯಲ್ಲಿರುತ್ತೀರಿ. ಕಾನೂನು ತತ್ವಗಳ ಆಯ್ಕೆ ಯಾವುದೇ ಇದ್ದರೂ, ವಾಶಿಂಗ್ಟನ್ ರಾಜ್ಯದ ಕಾನೂನು ಈ ಮಾರಾಟದ ನಿಯಮಗಳ ಅರ್ಥ ವಿವರಣೆಯನ್ನು ಮತ್ತು ಅವುಗಳ ಉಲ್ಲಂಘನೆಗಳ ಕ್ಲೈಮ್‌ಗಳನ್ನು ನಿಯಂತ್ರಿಸುತ್ತದೆ. ಸ್ಟೋರ್ ಮತ್ತು ಸೇವೆಗಳನ್ನು ನಾವು ನಿರ್ದೇಶಿಸುವ ದೇಶದ ಕಾನೂನುಗಳುಎಲ್ಲಾ ಇತರ ಕ್ಲೈಮ್‌ಗಳನ್ನು (ಗ್ರಾಹಕರ ರಕ್ಷಣೆ, ನ್ಯಾಯೋಚಿತವಲ್ಲದ ಸ್ಪರ್ಧೆ ಮತ್ತು ವೈಯಕ್ತಿಕ ಅಪರಾಧದ ಕ್ಲೈಮ್‌ಗಳನ್ನು ಒಳಗೊಂಡು) ನಿಯಂತ್ರಿಸುತ್ತವೆ.

b. ಮಧ್ಯ ಪ್ರಾಚ್ಯ ಅಥವಾ ಆಫ್ರಿಕಾ.ನೀವು ಮಧ್ಯ ಪ್ರಾಚ್ಯ ಅಥವಾ ಆಫ್ರಿಕಾದಲ್ಲಿ ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೀವು Microsoft Ireland Operations Limited, The Atrium Building, Block B, Carmanhall Road, Sandyford Industrial Estate, Dublin 18, Ireland ಜೊತೆಗಿನ ಗುತ್ತಿಗೆಯಲ್ಲಿರುತ್ತೀರಿ. ಕಾನೂನು ಸಂಘರ್ಷ ತತ್ವಗಳು ಯಾವುದೇ ಇದ್ದರೂ, ಐರ್ಲ್ಯಾಂಡ್ ಕಾನೂನುಗಳು ಈ ಮಾರಾಟದ ನಿಯಮಗಳ ಅರ್ಥ ವಿವರಣೆಯನ್ನು ಮತ್ತು ಅವುಗಳ ಉಲ್ಲಂಘನೆಗಳ ಕ್ಲೈಮ್‌ಗಳನ್ನು ನಿಯಂತ್ರಿಸುತ್ತವೆ. ಸ್ಟೋರ್ ಮತ್ತು ಸೇವೆಗಳನ್ನು ನಾವು ನಿರ್ದೇಶಿಸುವ ದೇಶದ ಕಾನೂನುಗಳು ಎಲ್ಲಾ ಇತರ ಕ್ಲೈಮ್‌ಗಳನ್ನು (ಗ್ರಾಹಕರ ರಕ್ಷಣೆ, ನ್ಯಾಯೋಚಿತವಲ್ಲದ ಸ್ಪರ್ಧೆ ಮತ್ತು ವೈಯಕ್ತಿಕ ಅಪರಾಧದ ಕ್ಲೈಮ್‌ಗಳನ್ನು ಒಳಗೊಂಡು) ನಿಯಂತ್ರಿಸುತ್ತವೆ. ಈ ಮಾರಾಟದ ನಿಯಮಗಳು ಅಥವಾ ಸ್ಟೋರ್‌ಗೆ ಸಂಬಂಧಿಸಿದ ಅಥವಾ ಅವುಗಳಿಂದ ಉಂಟಾಗುವ ಎಲ್ಲಾ ವಿವಾದಗಳಿಗೆ ಐರ್ಲ್ಯಾಂಡ್ ನ್ಯಾಯಾಲಯಗಳ ಏಕೈಕ ನ್ಯಾಯವ್ಯಾಪ್ತಿ ಮತ್ತು ಸ್ಥಳಕ್ಕೆ ನೀವು ಮತ್ತು ನಾವು ಮಾರ್ಪಡಿಸಲಾಗದಂತೆ ಒಪ್ಪುತ್ತೇವೆ.

c. ಕೆಳಗೆ ತಿಳಿಸಲಾಗಿರುವ ದೇಶಗಳನ್ನು ಹೊರತುಪಡಿಸಿ, ಏಷ್ಯಾ ಅಥವಾ ದಕ್ಷಿಣ ಫೆಸಿಫಿಕ್. ನೀವು ಏಷ್ಯಾದಲ್ಲಿ (ಚೀನಾ, ಜಪಾನ್, ಕೊರಿಯಾ ಗಣರಾಜ್ಯ ಅಥವಾ ತೈವಾನ್ ಹೊರತುಪಡಿಸಿ) ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೆವಾಡಾ ರಾಜ್ಯ, U.S.A. ದ ಕಾನೂನುಗಳ ಅಡಿಯಲ್ಲಿ ಸಂಯೋಜಿತವಾದ ಕಾರ್ಪೊರೇಶನ್ ಆದ ಮತ್ತು ಅದರ ಮುಖ್ಯ ವ್ಯವಹಾರ ಸ್ಥಳವನ್ನು 438B Alexandra Road, #04-09/12, Block B, Alexandra Technopark, Singapore, 119968 ನಲ್ಲಿ ಹೊಂದಿದ್ದು ಸಿಂಗಾಪುರ್ ಮತ್ತು ಹಾಂಗ್ ಕಾಂಗ್‌ನಲ್ಲಿ ಶಾಖೆಗಳನ್ನು ಹೊಂದಿರುವ Microsoft Regional Sales Corporation ಜೊತೆ ನೀವು ಗುತ್ತಿಗೆಯಲ್ಲಿರುತ್ತೀರಿ. ಕಾನೂನು ಸಂಘರ್ಷ ತತ್ವಗಳು ಯಾವುದೇ ಇದ್ದರೂ, ವಾಷಿಂಗ್ಟನ್ ರಾಜ್ಯದ ಕಾನೂನು ಈ ಮಾರಾಟದ ನಿಯಮಗಳ ಅರ್ಥ ವಿವರಣೆಯನ್ನು ಮತ್ತು ಅವುಗಳ ಉಲ್ಲಂಘನೆಗಳ ಕ್ಲೈಮ್‌ಗಳನ್ನು ನಿಯಂತ್ರಿಸುತ್ತವೆ. ಸ್ಟೋರ್ ನಾವು ನಿರ್ದೇಶಿಸುವ ದೇಶದ ಕಾನೂನುಗಳು ಎಲ್ಲಾ ಇತರ ಕ್ಲೈಮ್‌ಗಳನ್ನು (ಗ್ರಾಹಕರ ರಕ್ಷಣೆ, ನ್ಯಾಯೋಚಿತವಲ್ಲದ ಸ್ಪರ್ಧೆ ಮತ್ತು ವೈಯಕ್ತಿಕ ಅಪರಾಧದ ಕ್ಲೈಮ್‌ಗಳನ್ನು ಒಳಗೊಂಡು) ನಿಯಂತ್ರಿಸುತ್ತವೆ. ಈ ಮಾರಾಟದ ನಿಯಮಗಳು ಅಥವಾ ಸ್ಟೋರ್‌ನಿಂದ ಅಥವಾ ಅವುಗಳಿಗೆ ಸಂಬಂಧಿಸಿದ, ಅವುಗಳ ಅಸ್ತಿತ್ವ, ಮಾನ್ಯತೆ, ಅಥವಾ ಕೊನೆಗೊಳಿಸುವಿಕೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯೂ ಸೇರಿದಂತೆ, ಯಾವುದೇ ವಿವಾದವನ್ನು, ಈ ವಿಧಿಗೆ ಉಲ್ಲೇಖಿಸುವ ಮೂಲಕ ಸೇರಿಸಿಕೊಳ್ಳಲಾಗಿದೆ ಎಂದು ಭಾವಿಸಲಾಗುವ ನಿಯಮಗಳನ್ನು, ಸಿಂಗಾಪುರದಲ್ಲಿರುವ ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (SIAC) ಮಧ್ಯಸ್ಥಿಕೆ ನಿಯಮಗಳ ಪ್ರಕಾರ ಸಿಂಗಾಪುರದಲ್ಲಿರುವ ಮಧ್ಯಸ್ಥಿತಿಯ ಮೂಲಕ ಅಂತಿಮವಾಗಿ ಪರಿಹರಿಸಲಾಗುತ್ತದೆ. ನ್ಯಾಯ ಮಂಡಳಿಯು SIACಯ ಅಧ್ಯಕ್ಷರು ನೇಮಿಸುವ ಒಬ್ಬ ಮಧ್ಯಸ್ಥಿಕೆದಾರರನ್ನು ಒಳಗೊಂಡಿರುತ್ತದೆ. ಮಧ್ಯಸ್ಥಿಕೆಯ ಭಾಷೆಯು ಇಂಗ್ಲಿಷ್ ಆಗಿರುತ್ತದೆ. ಮಧ್ಯಸ್ಥಿಕೆದಾರರ ನಿರ್ಣಯವು ಅಂತಿಮವಾಗಿರುತ್ತದೆ, ಬದ್ಧವಾಗಿರತಕ್ಕದ್ದು, ಮತ್ತು ಪ್ರಶ್ನಾರ್ಹವಲ್ಲ, ಹಾಗೂ ಯಾವುದೇ ದೇಶ ಅಥವಾ ಪ್ರದೇಶದಲ್ಲಿನ ತೀರ್ಪಿಗೆ ಇದನ್ನು ಆಧಾರವಾಗಿ ಬಳಸಬಹುದಾಗಿದೆ.

d. ಜಪಾನ್. ನೀವು ಜಪಾನ್‌ನಲ್ಲಿ ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೀವು Microsoft Japan Co., Ltd (MSKK), Shinagawa Grand Central Tower, 2-16-3 Konan Minato-ku, Tokyo 108-0075 ಜೊತೆ ಗುತ್ತಿಗೆಯಲ್ಲಿರುತ್ತೀರಿ. ಜಪಾನ್ ಕಾನೂನುಗಳು ಈ ಮಾರಾಟದ ನಿಯಮಗಳನ್ನು ಮತ್ತು ಅವುಗಳಿಗೆ ಅಥವಾ ಸ್ಟೋರ್‌ಗೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ವಿಷಯಗಳನ್ನು ನಿಯಂತ್ರಿಸುತ್ತವೆ.

e. ಕೊರಿಯಾ ಗಣರಾಜ್ಯ. ನೀವು ಕೊರಿಯಾ ಗಣರಾಜ್ಯದಲ್ಲಿ ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೀವು Microsoft Korea, Inc., 11th Floor, Tower A, K-Twin Tower, Jongro 1 gil 50, Jongro-gu, Seoul, Republic of Korea, 110-150 ಜೊತೆ ಗುತ್ತಿಗೆಯಲ್ಲಿರುತ್ತೀರಿ. ಕೊರಿಯಾ ಗಣರಾಜ್ಯದ ಕಾನೂನುಗಳು ಈ ನಿಯಮಗಳನ್ನು ಮತ್ತು ಅವುಗಳಿಗೆ ಅಥವಾ ಸ್ಟೋರ್‌ಗೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ವಿಷಯಗಳನ್ನು ನಿಯಂತ್ರಿಸುತ್ತವೆ.

f. ತೈವಾನ್. ನೀವು ತೈವಾನ್‌ನಲ್ಲಿ ನೆಲೆಸಿದ್ದರೆ (ಅಥವಾ ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಮುಖ್ಯ ಸ್ಥಳ ಇದ್ದರೆ), ನೀವು Microsoft Taiwan Corporation, 18F, No. 68, Sec. 5, Zhongxiao E. Rd., Xinyi District, Taipei 11065, Taiwan ಜೊತೆ ಗುತ್ತಿಗೆಯಲ್ಲಿರುತ್ತೀರಿ. ತೈವಾನ್ ಕಾನೂನುಗಳು ಈ ಮಾರಾಟದ ನಿಯಮಗಳನ್ನು ಮತ್ತು ಅವುಗಳಿಗೆ ಅಥವಾ ಸ್ಟೋರ್‌ಗೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ವಿಷಯಗಳನ್ನು ನಿಯಂತ್ರಿಸುತ್ತವೆ. Microsoft Taiwan Corporation ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ಆರ್ಥಿಕ ವ್ಯವಹಾರಗಳ ಸಚಿವಾಲಯ R.O.C ಒದಗಿಸಿರುವ ವೆಬ್‌ಸೈಟ್ ಅನ್ನು ದಯವಿಟ್ಟು ವೀಕ್ಷಿಸಿ. (https://gcis.nat.gov.tw/main/index.jsp). ಈ ಮಾರಾಟದ ನಿಯಮಗಳು ಅಥವಾ ಸ್ಟೋರ್‌ಗೆ ಸಂಬಂಧಿಸಿದ ಅಥವಾ ಅವುಗಳಿಂದ ಉಂಟಾಗುವ ಎಲ್ಲಾ ವಿವಾದಗಳಿಗೆ, ತೈವಾನ್ ಕಾನೂನುಗಳು ಅನುಮತಿಸಿರುವ ಗರಿಷ್ಠ ಮಟ್ಟದವರೆಗೆ ತೈವಾನ್ ತೈಪೈ ಡಿಸ್ಟ್ರಿಕ್ಟ್ ನ್ಯಾಯಾಲಯವನ್ನು ನ್ಯಾಯವ್ಯಾಪ್ತಿಯನ್ನು ಹೊಂದಿರುವ ಮೊದಲ ನಿದರ್ಶನದ ನ್ಯಾಯಾಲಯವಾಗಿ ನೀವು ಮತ್ತು ನಾವು ಮಾರ್ಪಡಿಸಲಾಗದಂತೆ ನಿಯೋಜಿಸುತ್ತೇವೆ.

32. ಸೂಚನೆಗಳು.

a. ಬೌದ್ಧಿಕ ಆಸ್ತಿ ಉಲ್ಲಂಘನೆಗಳ ಕ್ಲೈಮ್‌ಗಳನ್ನು ಮಾಡುವುದಕ್ಕಾಗಿ ನೋಟೀಸುಗಳು ಮತ್ತು ಪ್ರಕ್ರಿಯೆಗಳು.ಮೂರನೇ ಪಕ್ಷಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು Microsoft ಗೌರವಿಸುತ್ತದೆ. ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೈಮ್‌ಗಳನ್ನು ಒಳಗೊಂಡು ಬೌದ್ಧಿಕ ಆಸ್ತಿ ಉಲ್ಲಂಘನೆಗಳ ನೋಟೀಸ್ ಅನ್ನು ಕಳುಹಿಸಲು ನೀವು ಬಯಸಿದರೆ, ಉಲ್ಲಂಘನೆಯ ನೋಟೀಸುಗಳನ್ನು ಸಲ್ಲಿಸುವುದಕ್ಕಾಗಿನ ನಮ್ಮ ಪ್ರಕ್ರಿಯೆಗಳನ್ನು ದಯವಿಟ್ಟು ಬಳಸಿ (http://approjects.co.za/?big=info/cpyrtInfrg.aspx). ಈ ಪ್ರಕ್ರಿಯೆಗೆ ಸಂಬಂಧಿಸದೇ ಇರುವ ಎಲ್ಲಾ ವಿಚಾರಣೆಗಳು ಪ್ರತಿಕ್ರಿಯೆಯನ್ನು ಸ್ವೀಕರಿಸುವುದಿಲ್ಲ.

ಕೃತಿಸ್ವಾಮ್ಯ ಉಲ್ಲಂಘನೆಯ ನೋಟೀಸುಗಳಿಗೆ ಪ್ರತಿಕ್ರಿಯೆ ನೀಡಲು ಶೀರ್ಷಿಕೆ 17, ಯುನೈಟೆಡ್ ಸ್ಟೇಟ್ಸ್ ನಿಯಮಾವಳಿ, ವಿಭಾಗ 512 ನಲ್ಲಿ ನಿರೂಪಿಸಲಾಗಿರುವ ಪ್ರಕ್ರಿಯೆಗಳನ್ನು Microsoft ಬಳಸುತ್ತದೆ. ಸೂಕ್ತ ಸಂದರ್ಭಗಳಲ್ಲಿ, ಪುನರಾವರ್ತಿತ ಉಲ್ಲಂಘಿಸುವವರ Microsoft ಸೇವೆಗಳ ಬಳಕೆದಾರರ ಖಾತೆಗಳನ್ನು ಸಹ Microsoft ನಿಷ್ಕ್ರಿಯಗೊಳಿಸಬಹುದು ಅಥವಾ ಮುಕ್ತಾಯಗೊಳಿಸಬಹುದು.

b. ಕೃತಿಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ನೋಟೀಸುಗಳು.

ಸ್ಟೋರ್ ಮತ್ತು ಸೇವೆಗಳ ಎಲ್ಲಾ ವಿಷಯಗಳು ©2016 Microsoft Corporation ಮತ್ತು/ಅಥವಾ ಅದರ ಪೂರೈಕೆದಾರರು ಮತ್ತು ಮೂರನೇ ಪಕ್ಷದ ನೀಡುಗರ, One Microsoft Way, Redmond, WA 98052, USA ಕೃತಿಸ್ವಾಮ್ಯ ಆಗಿರುತ್ತದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ನಾವು ಅಥವಾ ನಮ್ಮ ಪೂರೈಕೆದಾರರು ಮತ್ತು ಇತರ ಮೂರನೇ ಪಕ್ಷದ ನೀಡುಗರು ಸ್ಟೋರ್, ಸೇವೆಗಳು ಮತ್ತು ವಿಷಯದಲ್ಲಿ ಶೀರ್ಷಿಕೆ, ಕೃತಿಸ್ವಾಮ್ಯ ಮತ್ತು ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುತ್ತಾರೆ. Microsoft ಮತ್ತು ಹೆಸರುಗಳು, Microsoft ಉತ್ಪನ್ನಗಳು ಮತ್ತು ಸೇವೆಗಳ ಲೋಗೋಗಳು ಮತ್ತು ಐಕಾನ್‌ಗಳು ಯುನೈಟೆಡ್ ಸ್ಟೇಟ್ಸ್, ಕೆನಾಡ ಮತ್ತು/ಅಥವಾ ಇತರ ದೇಶಗಳಲ್ಲಿ Microsoft ನ ಟ್ರೇಡ್‌ಮಾರ್ಕ್‌ಗಳು ಅಥವಾ ನೋಂದಾಯಿತ ಟ್ರೇಡ್‌ಮಾರ್ಕ್‌ಗಳಾಗಿರುತ್ತದೆ.

Microsoft ಟ್ರೇಡ್‌ಮಾರ್ಕ್‌ಗಳ ಪಟ್ಟಿಯನ್ನು ಇಲ್ಲಿ ಕಾಣಬಹುದು: http://approjects.co.za/?big=trademarks. ನಿಜವಾದ ಕಂಪನಿಗಳು ಮತ್ತು ಉತ್ಪನ್ನಗಳ ಹೆಸರುಗಳು ಅವುಗಳ ಅನುಕ್ರಮ ಮಾಲೀಕರುಗಳ ಟ್ರೇಡ್‌ಮಾರ್ಕ್‌ಗಳಾಗಿರಬಹುದು. ಈ ಮಾರಾಟದ ನಿಯಮಗಳಲ್ಲಿ ಮುಕ್ತವಾಗಿ ನೀಡದೇ ಇರುವ ಯಾವುದೇ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

33. ಸುರಕ್ಷತೆಯ ಎಚ್ಚರಿಕೆ.ಸಂಭವನೀಯ ಗಾಯ, ಅಸೌಖ್ಯತೆ ಅಥವಾ ಕಣ್ಣಿನ ತ್ರಾಸವನ್ನು ತಪ್ಪಿಸಲು, ವಿಶೇಷವಾಗಿ ಗೇಮ್‌ಗಳು ಅಥವಾ ಇತರೆ ಅಪ್ಲಿಕೇಶನ್‌ಗಳ ಬಳಕೆ ಪರಿಣಾಮವಾಗಿ ನೀವು ನೋವು ಅಥವಾ ದಣಿವು ಅನುಭವಿಸುತ್ತಿದ್ದರೆ, ಅವುಗಳ ಬಳಕೆಗೆ ನೀವು ಸಾಂದರ್ಭಿಕವಾಗಿ ವಿರಾಮಗಳನ್ನು ನೀಡಬೇಕಾಗುತ್ತದೆ. ನೀವು ಅಸೌಖ್ಯತೆಯನ್ನು ಅನುಭವಿಸಿದಲ್ಲಿ, ವಿರಾಮವನ್ನು ತೆಗೆದುಕೊಳ್ಳಿ. ಅಸೌಖ್ಯತೆಯು ವಾಕರಿಕೆ, ಚಲನೆಯ ಅನಾರೋಗ್ಯ, ತಲೆಸುತ್ತುವಿಕೆ, ದಿಗ್ಭ್ರಮೆ, ತಲೆನೋವು, ಆಯಾಸ, ಕಣ್ಣಿನ ಆಯಾಸ, ಅಥವಾ ಕಣ್ಣಿನ ಶುಷ್ಕತೆಯ ಭಾವನೆಗಳನ್ನು ಒಳಗೊಂಡಿರಬಹುದು. ಅಪ್ಲಿಕೇಶನ್‌ಗಳ ಬಳಕೆಯು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು ಅಥವಾ ನಿಮ್ಮ ಪರಿಸರವನ್ನು ನಿರೋಧಿಸಬಹುದು. ಜಾರಿಬೀಳುವ ಅಪಾಯಗಳು, ಮೆಟ್ಟಿಲುಗಳು, ತಗ್ಗಾದ ಛಾವಣಿಗಳು, ಹಾನಿಗೀಡಾಗಬಲ್ಲ ನಾಜೂಕು ಅಥವಾ ಬೆಲೆಬಾಳುವ ವಸ್ತುಗಳಿಂದ ದೂರವಿರಿ. ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಳ್ಳುವ ಬೆಳಕಿನ ಫ್ಲ್ಯಾಶಿಂಗ್ ಅಥವಾ ಚಿತ್ರಾಕೃತಿಗಳಂತಹಾ ಕಣ್ಣಿಗೆ ಕಾಣಿಸುವ ಚಿತ್ರಗಳನ್ನು ನೋಡಿದಾಗ ಕೆಲವು ಜನರಿಗೆ ಸೆಳೆತದ ಅನುಭವವಾಗಬಹುದಾಗಿದೆ. ಸೆಳೆತದ ಇತಿಹಾಸ ಇಲ್ಲದಿರುವ ಜನರಲ್ಲಿಯೂ ಈ ಸೆಳೆತಗಳಿಗೆ ಕಾರಣವಾಗಬಲ್ಲ, ವೈದ್ಯಕೀಯವಾಗಿ ಪತ್ತೆಯಾಗದಿರುವ ಸ್ಥಿತಿ ಇರಬಹುದಾಗಿದೆ. ರೋಗಚಿಹ್ನೆಗಳೆಂದರೆ ತಲೆಸುತ್ತುವಿಕೆ, ದೃಷ್ಟಿ ವ್ಯತ್ಯಾಸ, ಸೆಳೆತ, ಎಳೆತ ಅಥವಾ ಕಾಲುಗಳ ಅದುರುವಿಕೆ, ದಿಗ್ಭ್ರಮೆ, ಗೊಂದಲ, ಪ್ರಜ್ಞೆ ತಪ್ಪುವಿಕೆ, ಅಥವಾ ನಡುಕ ಮುಂತಾದವು. ಇಂತಹಾ ಯಾವುದೇ ರೋಗಚಿಹ್ನೆಗಳು ನಿಮ್ಮ ಅನುಭವಕ್ಕೆ ಬಂದರೆ, ತಕ್ಷಣವೇ ಬಳಸುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ ಅಥವಾ ಸೆಳೆತಗಳಿಗೆ ಸಂಬಂಧಿಸಿದ ರೋಗಚಿಹ್ನೆಗಳು ನಿಮಗೆ ಈ ಹಿಂದೆ ಕಾಣಿಸಿಕೊಂಡಿದ್ದರೆ ಅಪ್ಲಿಕೇಶನ್‌ಗಳನ್ನು ಬಳಸುವ ಮೊದಲೇ ವೈದ್ಯರ ಸಲಹೆ ಪಡೆಯಿರಿ. ರೋಗ ಚಿಹ್ನೆಗಳ ಸೂಚನೆಗಳಿಗಾಗಿ ಪೋಷಕರು ತಮ್ಮ ಮಕ್ಕಳು ಬಳಸುತ್ತಿರುವ ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಡಬೇಕು.

 ಸೈಟ್ ಪ್ರತಿಕ್ರಿಯೆ